ಪಿಂಚಣಿದಾರರು ಅಂಚೆ ಕಛೇರಿ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ - Karavali Times ಪಿಂಚಣಿದಾರರು ಅಂಚೆ ಕಛೇರಿ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ - Karavali Times

728x90

26 October 2020

ಪಿಂಚಣಿದಾರರು ಅಂಚೆ ಕಛೇರಿ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ



ಮಂಗಳೂರು, ಅ. 26, 2020 (ಕರಾವಳಿ ಟೈಮ್ಸ್) : ಸರಕಾರದ ಪಿಂಚಣಿ ಪಡೆಯುವವರು ಪ್ರತೀ ವರ್ಷ ನವಂಬರ್‍ನಲ್ಲಿ  ‘ಜೀವನ್ ಪ್ರಮಾಣ್’ ಪತ್ರವನ್ನು ಸಲ್ಲಿಸಬೇಕಾಗುತ್ತದೆ.  ಅಂದರೆ ಪಿಂಚಣಿಯು ಮುಂದುವರಿಯಲು ತಾವು ಜೀವಂತ ಇರುವುದರ ಬಗ್ಗೆ ದೃಢೀಕರಣ ಪತ್ರ ನೀಡಬೇಕಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಿಂಚಣಿ ಪಡೆಯುವ ಬ್ಯಾಂಕ್ ಶಾಖೆಗಳಲ್ಲಿ ಪಿಂಚಣಿದಾರರು ಕೆಲ ವರ್ಷಗಳ ಹಿಂದಿನವರೆಗೆ ಖುದ್ದಾಗಿ ಭೇಟಿ  ನೀಡಿ ಅರ್ಜಿ ಭರ್ತಿ ಮಾಡಿ ನೀಡಬೇಕಾಗಿತ್ತು.

ಖುದ್ದು ಭೇಟಿ ನೀಡಬೇಕಾಗುವ ಅನಿವಾರ್ಯತೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಆಧಾರ್ ಆಧಾರಿತ  “ಜೀವನ್ ಪ್ರಮಾಣ್’ ಎಂಬ  ಅಜೀವ ಪ್ರಮಾಣ ಪತ್ರದ ವ್ಯವಸ್ಥೆಯನ್ನು ಕೇಂದ್ರ ಸರಕಾರವು 2014 ರಲ್ಲಿ ಆರಂಭಿಸಿತು. ಈ ವ್ಯವಸ್ಥೆಯಲ್ಲಿ ಪಿಂಚಣಿದಾರರು ದೇಶದ/ ಜಗತ್ತಿನ ಯಾವ ಮೂಲೆಯಿಂದಲು ಬಯೋಮೆಟ್ರಿಕ್ ದೃಢೀಕಣರದ ಮೂಲಕ “ಜೀವನ್ ಪ್ರಮಾಣ್’ ಪತ್ರವನ್ನು ಪಿಂಚಣಿ ನೀಡುವ ಇಲಾಖೆಗೆ ಡಿಜಿಟಲ್ ಮೂಲಕವಾಗಿ ಕಳುಹಿಸುವ ಸೌಕರ್ಯವಿದೆ.  ಆಂದರೆ ಪಿಂಚಣಿದಾರರು ಯಾವುದೇ ಊರಿನಿಂದ ಜೀವನ್ ಪ್ರಮಾಣ್ ತಂತ್ರಾಂಶದ ಮೂಲಕ ದೃಢೀಕರಣ ನೀಡಿದಾಗ ಅವರ ಅಜೀವ ಪ್ರಮಾಣ ಪತ್ರ ತಕ್ಷಣ ಪಿಂಚಣಿ ನೀಡುವ ಇಲಾಖೆ/ ಸಂಸ್ಥೆಗೆ ಡಿಜಿಟಲ್ ಮಾದ್ಯಮದ ಮೂಲಕವಾಗಿ ತಲುಪುತ್ತದೆ.

ಪಿಂಚಣಿದಾರಾರ ವಯಸ್ಸು, ಪ್ರಸ್ತುತ ಕೋವಿಡ್ ಸನ್ನೀವೇಶ ಹಾಗೂ ಸಮಯದ ವ್ಯಯವನ್ನು ನಿವಾರಿಸಲು  ಸರಕಾರವು ಭಾರತೀಯ ಅಂಚೆ ಇಲಾಖೆಯ ಮುಖಾಂತರ ಇಂಡಿಯಾ ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ ವತಿಯಿಂದ ಮನೆ ಬಾಗಿಲಲ್ಲಿ  ಅಥವಾ ಸಮೀಪದ  ಅಂಚೆ ಕಛೇರಿಗಳಲ್ಲಿ ‘ಜೀವನ್ ಪ್ರಮಾಣ’ ಪತ್ರವನ್ನು ಸಲ್ಲಿಸುವ ವ್ಯವಸ್ಥೆ  ಮಾಡಲಾಗಿದೆ. ಮೊಬೈಲ್ ಹಾಗೂ ಬಯೋಮೆಟ್ರಿಕ್ ಮೂಲಕ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

ಈ ವ್ಯವಸ್ಥೆ ಬಂದಿದ್ದರೂ ಬಹುತೇಕ ಮಂದಿ, ಖುದ್ದಾಗಿ ಪಿಂಚಣಿ ನೀಡುವ ಬ್ಯಾಂಕ್  ಖಾತೆಯ ಶಾಖೆಗೆ ಭೇಟಿ ನೀಡಿಯೇ ಜೀವನ್ ಪ್ರಮಾಣ್ ಪತ್ರಕ್ಕೆ ದೃಢೀಕರಣ ನೀಡುತಿದ್ದರು. ಈಗ ಈ ಹೊಸ ಸೌಲಭ್ಯದಿಂದ ಯಾವುದೇ ಪಿಂಚಣಿದಾರರು ತಮ್ಮ ಪೆÇೀಸ್ಟ್ ಮ್ಯಾನ್ ಅಥವಾ ಅಂಚೆ ಕಚೀರಿಯನ್ನು ಸಂಪರ್ಕಿಸಿ ಈ ಹೊಸ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಬಗ್ಗೆ ಕೇವಲ 70/- ರೂಪಾಯಿ ಮಾತ್ರ ಶುಲ್ಕ ವಿಧಿಸಲಾಗುತ್ತದೆ. 

ಈ ಹೊಸ  ಸೌಲಭ್ಯದಿಂದ ಪಿಂಚಣಿ ಪಡೆಯುತ್ತಿರುವ ಬೀಡಿ ಕಾರ್ಮಿಕರಿಗೆ ನಿವೃತ್ತ ಸೈನಿಕರಿಗೆ, ಇತರ ಕೇಂದ್ರ ಹಾಗೂ ರಾಜ್ಯ ಸರಕಾರಿ, ಇಲಾಖೆಗಳ, ಸಂಸ್ಥೆಗಳ ನಿವೃತ್ತ ಉದ್ಯೊಗಿಗಳು ಜೀವನ್ ಪ್ರಮಾಣ್ ವ್ಯವಸ್ಥೆ ಅಳವಡಿಸಿಕೊಂಡಿರುವ ಯಾವುದೇ ಇಲಾಖೆ, ಸಂಸ್ಥೆಯ ಪಿಂಚಣಿದಾರರೂ ಉಪಯೋಗ ಪಡೆದುಕೊಳ್ಳಬಹುದು. ನೂತನ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಎಲ್ಲಾ ಪಿಂಚಣಿದಾರರು ಪಡೆಯುವಂತೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ. 








  • Blogger Comments
  • Facebook Comments

0 comments:

Post a Comment

Item Reviewed: ಪಿಂಚಣಿದಾರರು ಅಂಚೆ ಕಛೇರಿ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ Rating: 5 Reviewed By: karavali Times
Scroll to Top