ಮಂಗಳೂರು, ಅಕ್ಟೋಬರ್ 12, 2020 (ಕರಾವಳಿ ಟೈಮ್) : ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ಬುಕ್ ಪೇಜ್ ಪ್ರಾಯೋಜಿತ “ಚಿಣ್ಣರಿಗಾಗಿ ಜೈನ ಕಥೆಗಳ ವಿಡಿಯೋ ಲೋಕಾರ್ಪಣೆ” ಸಮಾರಂಭ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ಬುಕ್ ಪುಟದಲ್ಲಿ ನೇರ ಪ್ರಸಾರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ಗಾಯಕಿ, ಎದೆ ತುಂಬಿ ಹಾಡುವೆನು ಶೋನ ರನ್ನರ್ ಅಪ್ ಆದಂತಹ ಶ್ರೀಯಾ ಪಿ ಜೈನ್ ಬೆಂಗಳೂರು ರವರ ಭಕ್ತಿಗೀತೆಗಳು ಮೊಳಗಿತು. ನಂತರ “ಚಿಣ್ಣರಿಗಾಗಿ ಜೈನ ಕಥೆಗಳು” ಇದರ ಟ್ರೈಲರ್ ಅನ್ನು ವೀಕ್ಷಿಸುವುದರ ಮೂಲಕ ಕರ್ನಾಟಕದಲ್ಲಿ ಈ ರೀತಿಯ ಹೊಸ ಯೋಜನೆಗೆ ಎಲ್ಲರ ಶುಭಹಾರೈಕೆಗಳು ದೊರೆತವು. ಕಾರ್ಯಕ್ರಮದ ಪ್ರಥಮ ಸಂಪ್ರದಾಯದಂತೆ ಜಿತೇಂದ್ರ ಕುಮಾರ್ ಮತ್ತು ಸೌಮ್ಯ ದಂಪತಿಗಳ ಪುತ್ರಿ ರೇಶಾಲ್ ಜೈನ್ ಅವರು ಓಂ ಮಂಗಲಂ ಎನ್ನುತ್ತಾ ಜಿನನನ್ನು ಸ್ಮರಿಸಿದರು.
“ಚಿಣ್ಣರಿಗಾಗಿ ಜೈನ ಕಥೆಗಳು” ಇದರ ನಿರ್ಮಾತೃಗಳಾಗಿರುವ ಜರ್ಮನಿಯಲ್ಲಿ ನೆಲೆಸಿರುವ ರಾಕೇಶ್ ಮತ್ತು ಸುರಭಿ ಬ್ರಹ್ಮದೇವ್ ದಂಪತಿಗಳು ಅನಿಮೇಷನ್ ವಿಡಿಯೋ ಮೂಲಕ ಪ್ರಸ್ತಾವನೆಗೈದರು. ನಂತರ ವೇಣೂರಿನ ಗೋಮಟೇಶ ವಿಗ್ರಹವನ್ನು ಕೆತ್ತಿಸಿದ ರಾಜವಂಶ, ವೇಣೂರು ಪುರವನ್ನಾಳಿದ ಮನೆತನದ ಅಜಿಲರಸ ಡಾ. ಪದ್ಮಪ್ರಸಾದ್ ಅಜಿಲರು ಕಾರ್ಯಕ್ರಮ ಉದ್ಘಾಟಿಸಿದರು. ಹೊಂಬುಜ ಶ್ರೀ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮಿಜಿಗಳು “ಚಿಣ್ಣರಿಗಾಗಿ ಜೈನ ಕಥೆಗಳು” ವೀಡಿಯೊಗಳನ್ನು ಲೋಕಾರ್ಪಣೆಗೊಳಿಸಿದರು. ಹಾಗೂ ಮೊಟ್ಟ ಮೊದಲನೆಯದಾಗಿ ಣಮೋಕಾರ ಮಂತ್ರದ ಮಹಿಮೆಯನ್ನೊಳಗೊಂಡ ‘ಅಂಜನ ಚೋರನ ಕಥೆ’ ಬಿಡುಗಡೆಗೊಳಿಸಲಾಯಿತು. ಮುಂದಿನ ಪ್ರತಿ ಭಾನುವಾರ ಬೆಳ್ಳಿಗೆ 9 ಗಂಟೆಗೆ ಸರಿಯಾಗಿ ‘ಕರ್ನಾಟಕದಲ್ಲಿ ಜೈನ ಧರ್ಮ’ ಫೇಸ್ಬುಕ್ ಪುಟದಲ್ಲಿ ಈ ಕಥೆಗಳ ಸರಣಿ ಆರಂಭವಾಗಲಿದೆ.
ಡಾ. ಪದ್ಮ ಪ್ರಸಾದ್ ಅಜಿಲರು ಮಾತನಾಡಿ ವಾಸ್ತವದಲ್ಲಿ ಎಲ್ಲರೂ ನಾಮಮಾತ್ರ ಜೈನರಾಗದೇ, ಆಚಾರದಲ್ಲೂ ಜೈನರಾಗಬೇಕಿದೆ, ಹೀಗಿದ್ದಾಗ ಮಾತ್ರ ಮುಂದಿನ ಪೀಳಿಗೆಯವರು ಕೂಡ ಇದರ ಅನುಸರಣೆ ಮಾಡುತ್ತಾರೆ ಎಂದರು.
ಮುಖ್ಯ ಅತಿಥಿಗಳಾದ ಸುವರ್ಣ ನ್ಯೂಸ್ ಚಾನೆಲ್ ಪ್ರಧಾನ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ ಈ ವಿಡಿಯೋಗಳು ಕೇವಲ ಮಕ್ಕಳಿಗಳಲ್ಲದೆ ದೊಡ್ಡವರು ಕೂಡ ತಿಳಿಯಲೇಬೇಕು. ಇದು ಕೇವಲ ಜೈನರಿಗಷ್ಟೇ ಅಲ್ಲದೆ ಪ್ರತಿ ಸಮುದಾಯಕ್ಕೂ ತಲುಪುವ ಮೂಲಕ ಜಾಗತಿಕ ಶಾಂತಿಯ ಪ್ರಸಾರ ಜೈನ ಸಿದ್ಧಾಂತಗಳ ಮೂಲಕ ನೆರವೇರಬೇಕೆಂದರು.
ಚಿಂತಕರು, ಸಾಹಿತಿಗಳು ಹಾಗೂ ನಿವೃತ್ತ ಉಪ ಪ್ರಾಂಶುಪಾಲರು ಆಗಿರುವ ಪೆÇ್ರ. ಅಜಿತ್ ಪ್ರಸಾದ್ ಮಾತನಾಡಿ ಓದುವ ಸಂಸ್ಕೃತಿ ಕುಂದುತ್ತಿರುವ ಪ್ರಸ್ತುತ ಜಗತ್ತಿನಲ್ಲಿ ಈ ರೀತಿಯ ವೀಡಿಯೊಗಳ ಕಾರ್ಯವೈಖರಿ ಹೊಸ ಬಗೆಯ ಮಾರ್ಗ ತೋರುತ್ತದೆ. ವಿದೇಶದಲ್ಲಿದ್ದುಕೊಂಡು ರಾಕೇಶ್ ಮತ್ತು ಸುರಭಿ ದಂಪತಿಗಳ ಈ ಕಾರ್ಯ ಶ್ಲಾಘನೀಯವಾದುದು. ಫೇಸ್ಬುಕ್ ಎಂದರೆ ಹೆದರುವ ಈ ಕಾಲದಲ್ಲಿ ಅದರ ಮೂಲಕ ನಡೆಯುತ್ತಿರುವ ಇಂತಹ ಧಾರ್ಮಿಕ ಕಾರ್ಯ ಮೆಚ್ಚುವಂತದ್ದು ಎಂದರು.
ಜರ್ಮನಿಯಲ್ಲಿ ನೆಲೆಸಿರುವ ವಿದೇಶಿ ಜೈನ ಸಂಘಟನೆಗಳ ಕಾರ್ಯದರ್ಶಿ ಸೌಮ್ಯ ಜೈನ್ ಮಾತನಾಡಿ, ಮಕ್ಕಳಿಗೆ ಸರಳವಾಗಿ ತಲುಪುವಂತಹ ಕಾರ್ಯ ಅಚ್ಚುಕಟ್ಟಾಗಿ ನೆರವೇರಿದೆ, ಈ ಕಾರ್ಯಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರು, ಹಾಗೂ ಜಿನದರ್ಶನ ಕಾರ್ಯಕ್ರಮದ ನಿರ್ಮಾಪಕರು ಬಿ. ಪ್ರಸನ್ನಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ ಹೊಂಬುಜ ಶ್ರೀ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ, ಪ್ರಸ್ತುತ ದಿನಗಳಲ್ಲಿ ಮಾನವ ಪ್ರಕೃತಿಯೊಂದಿಗೆ ಹೊಂದಿಕೊಂಡು ನಡೆಯಬೇಕಿದೆ. ಹಾಗೂ ತತ್ವ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಸ್ಪೂರ್ತಿ ಜೈನ್ ಬೆಂಗಳೂರು ಸ್ವಾಗತಿಸಿ, ಸುರಭಿ ಬ್ರಹ್ಮದೇವ್ ಸ್ವೀಡನ್ ವಂದಿಸಿದರು. ಸರ್ವಾರ್ಥ್ ಜೈನ್ ವೇಣೂರು ಶಾಂತಿಮಂತ್ರ ಪಠಿಸಿದರು. ರೇಡಿಯೋ ಸಿಟಿ ಆರ್ ಜೆ ರಜಸ್ ಜೈನ್ ಬೆಂಗಳೂರು ನಿರೂಪಿಸಿದರು,
ನಿರಂಜನ್ ಜೈನ್ ಕುದ್ಯಾಡಿ, ಚಿತ್ತ ಜಿನೇಂದ್ರ, ಸ್ಫೂರ್ತಿ ಜೈನ್, ವಜ್ರ ಕುಮಾರ್ ಬೆಂಗಳೂರು, ಮಹಾವೀರ್ ಪ್ರಸಾದ್ ಹೊರನಾಡು, ಸುದೇಶ್ ಜೈನ್ ಮಕ್ಕಿಮನೆ ಮಂಗಳೂರು, ಅಕ್ಷಯ್ ಜೈನ್ ಕೆರ್ವಾಶೆ, ರಾಕೇಶ್ ಜೈನ್ ಸ್ವೀಡನ್ ಸಹಕರಿಸಿದರು.
0 comments:
Post a Comment