ಅಬುಧಾಬಿ, ಅ. 20, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಧೋನಿ ಪಡೆಯಿಂದ ಗೆಲುವಿಗೆ ಸುಲಭ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ 15 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಗೆಲುವು ದಾಖಲಿಸಿದೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡ ಅತ್ಯಂತ ಕಡಿಮೆ ಮೊತ್ತ 126 ರನ್ ಗಳಿಸಿ ರಾಜಸ್ಥಾನಕ್ಕೆ 127 ರನ್ ಗಳ ಗುರಿ ನಿಗದಿಪಡಿಸಿತ್ತು.
126 ರನ್ ಗಳ ಸುಲಭ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ತಂಡ 28 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಜೊತೆಗೂಡಿದ ನಾಯಕ ಸ್ಮಿತ್ ಹಾಗೂ ಬಟ್ಲರ್ 4ನೇ ವಿಕೆಟ್‍ಗೆ 98 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು. 48 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 70 ರನ್ ಸಿಡಿಸಿದ ಬಟ್ಲರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಟ್ಲರ್ ಗೆ ಸಾಥ್ ನೀಡಿದ ನಾಯಕ ಸ್ಮಿತ್ 34 ಎಸೆತಗಳಲ್ಲಿ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಚೆನ್ನೈ ಪರ ದೀಪಕ್ ಚಹರ್ 4 ಓವರ್ ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರೆ, ಹಜಲ್‌ವುಡ್ 1 ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡ 125 ರನ್ ಗಳಷ್ಟೆ ಗಳಿಸಿತ್ತು. ಚೆನ್ನೈ ಪರ ಡುಪ್ಲೆಸಿಸ್ 10, ವ್ಯಾಟ್ಸನ್ 8, ಸ್ಯಾಮ್ ಕರ್ರನ್ 22, ರಾಯುಡು 13 ರನ್ ಗಳಿಸಿ ಪೆವಿಲಿಯನ್ ಪೆರೇಡ್ ನಡೆಸಿದರು. ಈ ವೇಳೆ ಕ್ರೀಸಿನಲ್ಲಿ ಜೊತೆಯಾದ ನಾಯಕ ಧೋನಿ ಹಾಗೂ ಜಡೇಜಾ ಅರ್ಧ ಶತಕದ ಜೊತೆಯಾಟ ನೀಡಿ ತಂಡ ರನ್ ಗಳಿಕೆಗೆ ಚೇತರಿಕೆ ನೀಡಿದರು. ಧೋನಿ 28 ಎಸೆತಗಳಲ್ಲಿ 28 ರನ್ ಗಳಿಸಿದ್ದರೆ, ಜಡೇಜಾ 30 ಎಸೆತಗಳಲ್ಲಿ 35 ರನ್, ಜಾದವ್ 7 ಎಸೆತಗಳಲ್ಲಿ 4 ರನ್ ಗಳಿಸಿ ಅಜೇಯಾರಾಗಿ ಉಳಿದರು. ರಾಜಸ್ಥಾನ ಪರವಾಗಿ ಉತ್ತಮ ದಾಳಿಗಾರಿಕೆ ಸಂಘಟಿಸಿದ್ದ ಅರ್ಚರ್, ತ್ಯಾಗಿ, ಗೋಪಾಲ್ ಹಾಗೂ ತಿವಾಟಿಯಾ ತಲಾ 1 ವಿಕೆಟ್ ಪಡೆದರು.
0 comments:
Post a Comment