ದುಬೈ, ಅ. 11, 2020 (ಕರಾವಳಿ ಟೈಮ್ಸ್) : ವೀಕೆಂಡ್ ದ್ವಿತೀಯ ದಿನವಾದ ಭಾನುವಾರ ಸಂಜೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಕೂಟದ 26ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ರೋಮಾಂಚಕವಾಗಿ 5 ವಿಕೆಟ್‍ಗಳಿಂದ ಪರಾಭಗೊಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಮನೀಷ್ ಪಾಂಡೆ ಭಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 158 ರನ್ ಕಲೆ ಹಾಕಿತು. 159 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡರೂ ಕೊನೆಯಲ್ಲಿ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಅವರ ಮುರಿಯದ ಜೊತೆಯಾಟದಿಂದಾಗಿ 1 ಎಸೆತ ಬಾಕಿ ಇರುವಂತೆ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.
12ನೇ ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ತಂಡ 85 ರನ್ ಗಳಿಸಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸಿನಲ್ಲಿ ಜೊತೆಗೂಡಿದ ರಿಯಾನ್ ಪರಾಗ್ ಹಾಗೂ ರಾಹುಲ್ ತೆವಾಟಿಯಾ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಜಯ ತಂದುಕೊಟ್ಟರು. ಈ ಜೋಡಿ 6ನೇ ವಿಕೆಟಿಗೆ 78 ರನ್‍ಗಳ ಜೊತೆಯಾಟವಾಡಿತು. ತೆವಾಟಿಯಾ 2 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 28 ಎಸೆತಗಳಲ್ಲಿ 45 ರನ್ ಸಿಡಿಸಿದರು. ಪರಾಗ್ 26 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಒಳಗೊಂಡ 42 ರನ್ ಸಿಡಿಸಿ ತಂಡಕ್ಕೆ ಅರ್ಹ ಜಯ ತಂದುಕೊಟ್ಟರು.
0 comments:
Post a Comment