ಡೆಲ್ಲಿ ಮಣಿಸಿ ಮತ್ತೆ ಅಗ್ರ ಪಟ್ಟಕ್ಕೇರಿದ ಮುಂಬೈ - Karavali Times ಡೆಲ್ಲಿ ಮಣಿಸಿ ಮತ್ತೆ ಅಗ್ರ ಪಟ್ಟಕ್ಕೇರಿದ ಮುಂಬೈ - Karavali Times

728x90

11 October 2020

ಡೆಲ್ಲಿ ಮಣಿಸಿ ಮತ್ತೆ ಅಗ್ರ ಪಟ್ಟಕ್ಕೇರಿದ ಮುಂಬೈ

 


ಜಯದೊಂದಿಗೆ ಮುಂಬೈ ಪರ 150ನೇ ಪಂದ್ಯ ಪೂರೈಸಿದ ರೋಹಿತ್ ಶರ್ಮ


ಅಬುಧಾಬಿ, ಅ. 11, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ವಾರಾಂತ್ಯ ಭಾನುವಾರದ‌ ದ್ವಿತೀಯ ಪಂದ್ಯದಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿದ  ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 162 ರನ್ ಕಲೆಹಾ, ಮುಂಬೈ ತಂಡಕ್ಕೆ 163 ರನ್ ಗಳ ಗುರಿ ನಿಗದಿಪಡಿಸಿತ್ತು.

ಗುರಿ ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲೇ ಮುಗ್ಗರಿಸಿ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಅಗ್ಗದಲ್ಲಿ ಕಳೆದುಕೊಂಡಿತು. ಕೇವಲ 5 ರನ್ ಗಳಿಸಿದ ರೋಹಿತ್ ಅಕ್ಷರ್ ಪಟೇಲ್ ಗೆ ಬಲಿಯಾದರು. ಆದರೆ  ಸೂರ್ಯಕುಮಾರ್ ಯಾದವ್ ಹಾಗೂ ಕ್ವಿಂಟನ್ ಡಿ ಕಾಕ್ ಇಬ್ಬರೂ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು.  

ಅಬ್ಬರದ ಆಟಕ್ಕೆ ಮಾರುಹೋದ ಕ್ವಿಂಟನ್ ಡಿ ಕಾಕ್ ಅವರು 33 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಆದರೆ 9ನೇ ಓವರಿನ 5ನೇ ಎಸೆತದಲ್ಲಿ ಡಿಕಾಕ್ (53, 36 ಎಸೆತ) ರವಿಚಂದ್ರನ್ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ  ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಕೊಂಡ ಇಶಾನ್ ಕಿಶನ್ ತಂಡವನ್ನು ಶತಕದ ಗಡಿ ದಾಟಿಸಿದರು.

ವೇಗದ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ ಕೂಡಾ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸಿಕ್ಸರ್ ಮೂಲಕ ತಮ್ಮ ಅರ್ಧಶತಕ‌ ಪೂರ್ತೊಗೊಳಿಸಿದ ಯಾದವ್ ನಂತರದ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಔಟಾದರು. ಬಳಿಕ ಕ್ರೀಸಿಗೆ ಬಂದ ಹಾರ್ದಿಕ್ ಪಾಂಡ್ಯ ಶೂನ್ಯ ಸಂಪಾದನೆಯೊಂದಿಗೆ ಬಂದ ದಾರಿಯಲ್ಲೇ ಮರಳಿದರು. ಬಳಿಕ ಇಶಾನ್ ಕಿಶನ್ (28 ರನ್, 15 ಎಸೆತ, 2 ಸಿಕ್ಸರ್, 2 ಬೌಂಡರಿ) ಕಗಿಸೊ ರಬಡಾ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಕ್ರೀಸಿನಲ್ಲಿ‌ ಜೊತೆಯಾದ ಕೀರನ್ ಪೊಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ಮುಂಬೈ ತಂಡದ ಜಯದ ಔಪಚಾರಿಕತೆಯನ್ನು 2 ಎಸೆತ ಬಾಕಿ ಇರುವಂತೆ ಪೂರ್ಣಗೊಳಿಸಿದರು. 


 ಮುಂಬೈ ಪರ 150ನೇ ಪಂದ್ಯವನ್ನು ಜಯದೊಂದಿಗೆ ಪೂರೈಸಿದ ರೋಹಿತ್


2011ರ ಐಪಿಎಲ್‍ನಲ್ಲಿ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದ್ದರು. ಅಂದಿನಿಂದ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ರೋಹಿತ್ ಶರ್ಮಾ ಮುಂಬೈ ತಂಡ 2013, 2015, 2017 ಮತ್ತು 2019ರ ಐಪಿಎಲ್‍ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗುವಂತೆ ಮಾಡಿದರು. ಇಂದಿನ ಪಂದ್ಯದ ಮೂಲಕ ಮುಂಬೈ ತಂಡಕ್ಕಾಗಿ 150ನೇ ಪಂದ್ಯವನ್ನು ಆಡಿದ ರೊಹಿತ್ ಶರ್ಮಾ ಇದನ್ನೂ ಜಯವಾಗಿ ಪರಿವರ್ತಿಸಿ ಸ್ಮರಣೀಯವಾಗಿಸಿಕೊಂಡರು.








  • Blogger Comments
  • Facebook Comments

0 comments:

Post a Comment

Item Reviewed: ಡೆಲ್ಲಿ ಮಣಿಸಿ ಮತ್ತೆ ಅಗ್ರ ಪಟ್ಟಕ್ಕೇರಿದ ಮುಂಬೈ Rating: 5 Reviewed By: karavali Times
Scroll to Top