ಸಿಕ್ಸರ್, ಬೌಂಡರಿಗಳ ಸುರಿಮಳೆಗೆ ಸಾಕ್ಷಿಯಾದ ಪಂದ್ಯ, 28 ಸಿಕ್ಸರ್ ಹಾಗೂ 30 ಬೌಂಡರಿ ಸಿಡಿತ
ಶಾರ್ಜಾ, ಅ. 04, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 18 ರನ್ ಗಳ ಗೆಲುವು ತನ್ನದಾಗಿಸಿಕೊಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಪಟ್ಟವನ್ನು ಡೆಲ್ಲಿ ಕಸಿದುಕೊಂಡಿದೆ. ಅಗ್ರಸ್ಥಾನದಲ್ಲಿದ್ದ ಬೆಂಗಳೂರು ದ್ವಿತೀಯ ಸ್ಥಾನಕ್ಕೆ ಇಳಿದಿದೆ.
ಗೆಲ್ಲಲು 229 ರನ್ ಗಳ ಕಠಿಣ ಗುರಿ ಪಡೆದ ಕೋಲ್ಕತ್ತಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು. ಈ ಪಂದ್ಯದಲ್ಲಿ ಕೋಲ್ಕತ್ತಾ ಪರ 14 ಸಿಕ್ಸ್, 12 ಬೌಂಡರಿ ಬಂದರೆ ಡೆಲ್ಲಿ ಪರ14 ಸಿಕ್ಸ್, 18 ಬೌಂಡರಿ ಸಿಡಿಯಲ್ಪಟ್ಟಿತ್ತು.
ತಂಡದ ಮೊತ್ತ 117 ರನ್ ಆಗಿದ್ದಾಗ ಬೌಲರ್ ಹರ್ಷಲ್ ಪಟೇಲ್ ನಿತೀಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಅವರ ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಕೊನೆಯಲ್ಲಿ ಮಾರ್ಗನ್ ಮತ್ತು ತ್ರಿಪಾಠಿ ಸಿಕ್ಸ್ ಬೌಂಡರಿಗಳನ್ನು ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ತಂಡದ ಮೊತ್ತ 200 ಆಗಿದ್ದಾಗ ಮಾರ್ಗನ್ 44 ರನ್ (18 ಎಸೆತ, 1 ಬೌಂಡರಿ, 5 ಸಿಕ್ಸ್) ಹೊಡೆದು ಕ್ಯಾಚ್ ನೀಡಿ ಔಟಾದರೆ 207 ರನ್ ಆಗಿದ್ದಾಗ 36 ರನ್ (16 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದ ತ್ರಿಪಾಠಿ ಔಟದರು.
ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದ ಕೆಕೆಆರ್ ತಂಡಕ್ಕೆ ಇಯಾನ್ ಮಾರ್ಗನ್ ಕೊಂಚ ಆಸರೆಯಾದರು. ಗೆಲ್ಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದರು. ಆದರೆ ಕೊನೆಯ ಹಂತದಲ್ಲಿ 18.3ನೇ ಓವರಿನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಮಾರ್ಗನ್ ಕೇವಲ 18 ಬಾಲ್‍ಗೆ 44 ರನ್ ಸಿಡಿಸಿದ್ದರು. 5 ಸಿಕ್ಸ್ 1 ಬೌಂಡರಿ ಚಚ್ಚುವ ಮೂಲಕ ಗೆಲುವಿನ ಆಸೆ ಮೂಡಿಸಿದರು.
ರಾಣಾ 35 ಬಾಲ್‍ಗೆ 58 ರನ್ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ರಾಣಾ ತಂಡ 117 ರನ್ ಗಳಿಸಿದ ಸಂದರ್ಭದಲ್ಲಿ 12 ಓವರಿನ 4ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.
ಮಾರ್ಗನ್ ಹಾಗೂ ತ್ರಿಪಾಠಿ ಇಬ್ಬರೂ ಭರ್ಜರಿ ಜೊತೆಯಾಟ ಆರಂಭಿಸಿದ್ದರು. ಕೇವಲ 31 ಬಾಲ್‍ಗೆ 78 ರನ್ ಸಿಡಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು. 13ನೇ ಓವರಿಗೆ ಕಮ್ಮಿನ್ಸ್ ಔಟಾದ ಬಳಿಕ ಆಗಮಿಸಿದ್ದ ತ್ರಿಪಾಠಿ, ಮಾರ್ಗನ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದ್ದರು. ಇಬ್ಬರ ಜೊತೆಯಾಟದಲ್ಲಿ ಬರೋಬ್ಬರಿ 8 ಸಿಕ್ಸ್ 4 ಬೌಂಡರಿ ಚೆಚ್ಚಿದ್ದರು.
ಇದಕ್ಕು ಮೊದಲು ರಾಣಾ ಹಾಗೂ ಗಿಲ್ ತಮ್ಮ ಜೊತೆಯಾಟದಲ್ಲಿ 41 ಬಾಲ್‍ಗೆ 64 ರನ್ ಗಳಿಸಿದರು. ಇದರಲ್ಲಿ 5 ಸಿಕ್ಸ್ 6 ಬೌಂಡರಿ ಚಚ್ಚಿದ್ದರು. 8ನೆ ಓವರ್ ಆರಂಭವಾಗುತ್ತಿದ್ದಂತೆ ಗಿಲ್ ವಿಕೆಟ್ ಒಪ್ಪಿಸಿದರು.
ಶುಭಮನ್ ಗಿಲ್ 22 ಬಾಲ್‍ಗೆ 28 ರನ್ ಗಳಿಸಿ ಔಟಾಗುತ್ತಿದ್ದಂತೆ 9.5ನೇ ಓವರ್ನಲ್ಲಿ ಆಂಡ್ರೆ ರಸೆಲ್ ಸಹ 8 ಬಾಲ್‍ಗೆ 13 ಹೊಡೆದು ವಿಕೆಟ್ ಒಪ್ಪಿಸಿದರು. ಹೀಗೆ ಡೆಲ್ಲಿ ತಂಡ ವೇಗವಾಗಿ ವಿಕೆಟ್ ಕಳೆದುಕೊಂಡಿತು. 13.3ನೇ ಓವರಿಗೆ ಪ್ಯಾಟ್ ಕಮ್ಮಿನ್ಸ್ ಸಹ 4 ಬಾಲ್‍ಗೆ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
0 comments:
Post a Comment