ದುಬೈ, ಅ. 06, 2020 (ಕರಾವಳಿ ಟೈಮ್ಸ್) : ಯುವ ಆಟಗಾರ ಪೃಥ್ವಿ ಶಾ (42) ಹಾಗೂ ಮಾರ್ಕಸ್ ಸ್ಟೋಯಿನಿಸ್ (ಅಜೇಯ 53) ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ದುಬೈಯಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಗೆ 196 ರನ್ ಗಳಿಸಿತು. ಪೃಥ್ವಿ ಶಾ 42, ಶಿಖರ್ ಧವನ್ 32, ರಿಷಬ್ ಪಂತ್ 37, ಶಿಮ್ರಾನ್ ಹೆಟ್ಮರ್ ಅಜೇಯ 11 ರನ್ ಗಳಿಸಿದ್ದರು. ಆರ್ಸಿಬಿ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ 2, ಮೊಹಿನ್ ಅಲಿ ಹಾಗೂ ಇಸುರು ಉದಾನ್ ತಲಾ 1 ವಿಕೆಟ್ ಪಡೆದರು.
197 ರನ್ ಗಳ ಗುರಿ ಬೆನ್ನಟ್ಟಿದ ಕೊಹ್ಲಿ ಪಡೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್ಸಿಬಿ 59 ರನ್ ಗಳಿಂದ ಡೆಲ್ಲಿಗೆ ಶರಣಾಯಿತು.
ಆರ್ಸಿಬಿ ಪರ ಆರೋನ್ ಫಿಂಚ್ 13, ವಿರಾಟ್ ಕೊಹ್ಲಿ 43, ಮೊಹಿನ್ ಅಲಿ 11, ವಾಷಿಂಗ್ಟನ್ ಸುಂದರ್ 17, ನವದೀಪ್ ಸೈನಿ ಅಜೇಯ 12 ರನ್ ಬಾರಿಸಿದ್ದಾರೆ.
ಡೆಲ್ಲಿ ಪರ ಬೌಲಿಂಗ್ ನಲ್ಲಿ ಕಾಗಿಸೋ ರಬಾಡ 4, ಅನ್ ರಿಚ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
0 comments:
Post a Comment