ಶಾರ್ಜಾ, ಅ. 10, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್ ಕೂಟದ 23ನೇ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ ಡೆಲ್ಲಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 46 ರನ್ ಗಳಿಂದ ಸೋಲಿಸುವ ಮೂಲಕ ಅಂಕಪಟ್ಡಿಯಲ್ಲಿ ಅಗ್ರ ಪಟ್ಟ ಕಾಯ್ದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡ ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ 183 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭವೇ ನೀರಸವಾಗಿತ್ತು. ಅಂತಿಮವಾಗಿ 19.4 ಓವರಿನಲ್ಲಿ ಆಲೌಟ್ ಆಯ್ತು.
ಆರಂಭದಲ್ಲಿ ವಿಕೆಟ್ ಕಳೆದುಕೊಂಡರು ಡೆಲ್ಲಿ ಕೊನೆಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತ ಕಲೆಹಾಕಿತು. ಅಂತೆಯೇ ಬೌಲಿಂಗ್‍ನಲ್ಲೂ ಕಮಾಲ್ ಮಾಡಿದ ಡೆಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಉತ್ತಮವಾಗಿ ಬೌಲ್ ಮಾಡಿದ ಕಗಿಸೊ ರಬಾಡಾ ಮೂರು ವಿಕೆಟ್ ಪಡೆದರೆ ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಆಕ್ಸರ್ ಪಟೇಲ್, ಹರ್ಷಲ್ ಪಟೇಲ್ ಮತ್ತು ಅನ್ರಿಕ್ ನಾಟ್ರ್ಜೆ ಒಂದು ವಿಕೆಟ್ ಕಿತ್ತರು. ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡಿದ ಹೆಟ್ಮೆಯರ್ ಉತ್ತಮ ಎರಡು ಕ್ಯಾಚ್ ಹಿಡಿದರು.
ಡೆಲ್ಲಿ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ರಾಜಸ್ಥಾನದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದರು. ಆದರೆ ಮೂರನೇ ಓವರಿಗೆ ಬೌಲಿಂಗ್ ಬಂದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು, ಎಂಟು ಬಾಲಿಗೆ 13 ರನ್ ಸಿಡಿಸಿದ್ದ ಬಟ್ಲರ್ ಅವರನ್ನು ಔಟ್ ಮಾಡಿದರು. ನಂತರ ಒಂದಾದ ನಾಯಕ ಸ್ಟೀವ್ ಸ್ಮಿತ್ ಮತ್ತು ಯಶಸ್ವಿ ಜೈಸ್ವಾಲ್ ತಾಳ್ಮೆಯ ಆಟಕ್ಕೆ ಮುಂದಾದರು. ಪರಿಣಾಮ ರಾಜಸ್ಥಾನ್ ತಂಡ ಆರು ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು 41 ರನ್ ಸೇರಿಸಿತು.
ನಂತರ ಜೈಸ್ವಾಲ್ ಮತ್ತು ಸ್ಮಿತ್ 34 ಎಸೆತಗಳಲ್ಲಿ 42 ರನ್‍ಗಳ ಜೊತೆಯಾಟವಾಡಿದರು. ಆದರೆ 8ನೇ ಓವರಿನ ಮೊದಲ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಸ್ಮಿತ್ ಅನ್ರಿಕ್ ನಾಟ್ರ್ಜೆ ಅವರಿಗೆ ವಿಕೆಟ್ ಒಪ್ಪಿಸಿದರು. 17 ಎಸೆತಗಳಲ್ಲಿ 24 ರನ್ ಸಿಡಿಸಿದ್ದ ಸ್ಮಿತ್ ಅವರು ಶಿಮ್ರಾನ್ ಹೆಟ್ಮಿಯರ್ ಹಿಡಿದ ಉತ್ತಮ ಕ್ಯಾಚ್ ಗೆ ಬಲಿಯಾದರು. ನಂತರ 10ನೇ ಓವರಿನ 3ನೇ ಎಸೆತದಲ್ಲಿ ಐದು ರನ್ ಗಳಿಸಿದ ಸಂಜು ಸ್ಯಾಮ್ಸನ್ ಅವರು ಪೆವಿಲಿಯನ್ ಸೇರಿದರು.
0 comments:
Post a Comment