ದುಬೈ, ಅ. 15, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಕೂಟದ 30ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ದ ರೋಮಾಂಚಕವಾಗಿ 13 ರನ್‍ಗಳಿಂದ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಅಗ್ರಪಟ್ಟಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ಶ್ರೇಯಸ್ ಐಯ್ಯರ್ ಮತ್ತು ಶಿಖರ್ ಧವನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 162 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ವೇಗಿಗಳ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ 148 ರನ್‍ಗಳಷ್ಟೆ ಗಳಿಸಿ 12 ರನ್‍ಗಳಿಂದ ಶರಣಾಯಿತು.
ಆರಂಭದಿಂದಲೇ ಉತ್ತಮವಾಗಿ ದಾಳಿಗಾರಿಕೆ ನಡೆಸಿದ ಡೆಲ್ಲಿ ತಂಡದ ದಾಳಿಗಾರರು, ರಾಜಸ್ಥಾನ್ ದಾಂಡಿಗರನ್ನು ಕಟ್ಟಿ ಹಾಕಿದರು. 4 ಓವರ್ ಬೌಲ್ ಮಾಡಿದ ಅನ್ರಿಚ್ ನಾಟ್ರ್ಜೆ ಅವರು 33 ರನ್ ನೀಡಿ 2 ವಿಕೆಟ್ ಕಿತ್ತರೆ, ತುಷಾರ್ ದೇಶಪಾಂಡೆ 4 ಓವರ್ ಬೌಲ್ ಮಾಡಿ 37 ರನ್‍ಗಳಿಗೆ 2 ವಿಕೆಟ್ ಕಿತ್ತರು. ಕಗಿಸೊ ರಬಡಾ, ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ಡೆಲ್ಲಿ ಕೊಟ್ಟ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕರಾಗಿ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಅವರು ಕಣಕ್ಕಿಳಿದರು. ಆರಂಭದಲ್ಲೇ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ತಂಡ 37 ರನ್ ಗಳಿಸಿದ್ದಾಗ ಮೂರನೇ ಓವರಿನ ಕೊನೆ ಎಸೆತದಲ್ಲಿ ಜೋಸ್ ಬಟ್ಲರ್ (22 ರನ್, 9 ಎಸೆತ) ಅವರು ಅನ್ರಿಚ್ ನಾಟ್ರ್ಜೆ ಅವರಿಗೆ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ ಅವರು ರವಿಚಂದ್ರನ್ ಅಶ್ವಿನ್‍ಗೆ ವಿಕೆಟ್ ಒಪ್ಪಿಸಿದರು.
ನಂತರ ಜೊತೆಯಾದ ಸ್ಟೋಕ್ಸ್ ಮತ್ತು ಸ್ಯಾಮ್ಸನ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ನಡೆಸಿದರು. 35 ಎಸೆತಗಳಲ್ಲಿ 41 ರನ್‍ಗಳಿಸಿ ಆಡುತ್ತಿದ್ದ ಬೆನ್ ಸ್ಟೋಕ್ಸ್ ಅವರು ತುಷಾರ್ ದೇಶಪಾಂಡೆ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ 18 ಎಸೆತಗಳಲ್ಲಿ 25 ರನ್‍ಗಳಿಸಿ ತಾಳ್ಮೆಯಿಂದ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 11ನೇ ಓವರಿನ 4ನೇ ಎಸೆತಗಳಲ್ಲಿ ಅಕ್ಷರ್ ಪಟೇಲ್‍ಗೆ ಕ್ಲೀನ್ ಬೌಲ್ಡ್ ಆದರು. ಇಲ್ಲದ ರನ್‍ಗಾಗಿ ಓಡಿದ ರಿಯಾನ್ ಪರಾಗ್ ರನೌಟ್ ಆದರು. ನಂತರ 17ನೇ ಓವರಿನ ಮೂರನೇ ಎಸೆತದಲ್ಲಿ 27 ಎಸೆತಗಳಲ್ಲಿ 32 ರನ್ ಸಿಡಿಸಿ ಆಡುತ್ತಿದ್ದ ರಾಬಿನ್ ಉತ್ತಪ್ಪ ಅವರು ನಾಟ್ರ್ಜೆ ಅವರ ಯಾರ್ಕರ್‍ಗೆ ಬೌಲ್ಡ್ ಆದರು.
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನಿಂಗ್ಸ್‍ನ ಮೊದಲ ಎಸೆತದಲ್ಲೇ ಪೃಥ್ವಿ ಶಾ ಔಟ್ ಆದರು. ನಂತರ ಜೊತೆಯಾದ ನಾಯಕ ಶ್ರೇಯಸ್ ಐಯ್ಯರ್ ಹಾಗೂ ಶಿಖರ್ ಧವನ್ ಇಬ್ಬರು ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. 33 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿ ಸಹಿತ ಶಿಖರ್ ಧವನ್ 27 ರನ್ ಸಿಡಿಸಿದರೆ, ಶ್ರೇಯಸ್ ಐಯ್ಯರ್ ಅವರು, 43 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 53 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ್ ತಂಡಕ್ಕೆ 163 ರನ್‍ಗಳ ಟಾರ್ಗೆಟ್ ನೀಡಿದ್ದರು.
ಅನ್ರಿಚ್ ನಾಟ್ರ್ಜೆ ಫಾಸ್ಟೆಸ್ಟ್ ರೆಕಾರ್ಡ್
ಡೆಲ್ಲಿ ಕ್ಯಾಪಿಟಲ್ ತಂಡದ ವೇಗಿ ಅನ್ರಿಚ್ ನಾಟ್ರ್ಜೆ ಅವರು ಐಪಿಎಲ್ ಇತಿಹಾದಲ್ಲೇ ವೇಗದ ಎಸೆತ ಎಸೆದು ದಾಖಲೆ ಮಾಡಿದ್ದಾರೆ. ಗಂಟೆಗೆ 156.22 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದಾರೆ. ಜೊತೆಗೆ ಗಂಟೆಗೆ 155.21 ಕಿಮೀ ವೇಗದಲ್ಲಿ ಐಪಿಎಲ್ ಇತಿಹಾಸದಲ್ಲೇ ಎರಡನೇ ವೇಗದ ಬಾಲ್ ಎಸೆದಿದ್ದಾರೆ. ಮೂರನೇ ವೇಗದ ಎಸೆತವು ಕೂಡ ಅನ್ರಿಚ್ ನಾಟ್ರ್ಜೆ ಅವರ ಹೆಸರಿನಲ್ಲಿದ್ದು, ಗಂಟೆಗೆ 154.74 ಕಿ.ಮೀ ವೇಗದಲ್ಲಿ ಮೂರನೇ ಬಾಲ್ ಬೌಲ್ ಮಾಡಿದ್ದಾರೆ. ಗಂಟೆಗೆ 154.40 ಕಿ.ಮೀ ವೇಗದಲ್ಲಿ ಬೌಲ್ ಮಾಡಿರುವ ವೇಗಿ ಡೇಲ್ ಸ್ಟೇನ್ ಅವರು 4ನೇ ಸ್ಥಾನದಲ್ಲಿ ಇದ್ದಾರೆ.
0 comments:
Post a Comment