ದುಬೈ, ಅ. 04, 2020 (ಕರಾವಳಿ ಟೈಮ್ಸ್) : ಆರಂಭಿಕರಾ ವಾಟ್ಸನ್ ಹಾಗೂ ಡುಪ್ಲೆಸಿಸ್ ಅವರ ಮಯರಿಯದ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ವಿರುದ್ದ ನೋ ಲಾಸ್ ಗೆಲುವು ದಾಖಲಿಸಿದೆ.
ದುಬೈಯಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ ಭಾನುವಾರ ರಾತ್ರಿ ನಡೆದ 18ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ್ದ 179 ರನ್‍ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕಳೆದುಕೊಳ್ಳದೆ ಗುರಿ ತಲುಪಿತು.
ಫಾಫ್ ಡುಪ್ಲೆಸಿಸ್ 53 ಎಸೆತಗಳಲ್ಲಿ 87 ರನ್ (3 ಸಿಕ್ಸರ್, 11 ಬೌಂಡರಿ) ಭಾರಿಸಿದರೆ, ಶೇನ್ ವ್ಯಾಟ್ಸನ್ ಅವರೂ 53 ಎಸೆತಗಳಲ್ಲಿ 83 ರನ್ (3 ಸಿಕ್ಸರ್, 11 ಬೌಂಡರಿ) ಭಾರಿಸುವ ಮೂಲಕ ತಂಡಕ್ಕೆ ಭರ್ಜರಿ ಜಯ ದೊರಕಿಸಿಕೊಟ್ಟರು.
ಪವರ್ ಪ್ಲೇಯ ಅಂತಿಮ ಓವರ್ ನಲ್ಲಿ ಡುಪ್ಲೆಸಿಸ್ ನಾಲ್ಕು ಬೌಂಡರಿ ಸಿಡಿಸುವ ಮೂಲಕ ಒಂದೇ ಓವರ್ ನಲ್ಲಿ 18 ರನ್ ಕಲೆ ಹಾಕಿದರು. ವ್ಯಾಟ್ಸನ್ ಮೊದಲ ಬಾಲ್‍ನಲ್ಲಿ ಸಿಂಗಲ್ ತೆಗೆದುಕೊಟ್ಟ ಬಳಿಕ ಡುಪ್ಲೆಸಿಸ್ ಮೇಲಿಂದ ಮೇಲೆ ಬೌಂಡರಿ ಬಾರಿಸಿದರು.
ಪವರ್ ಪ್ಲೇ ಮುಗಿಯುವಷ್ಟರಲ್ಲಿ ಈ ಜೋಡಿ 66 ರನ್ ಗಳಿಸುವ ಮೂಲಕ ಭರ್ಜರಿ ರನ್ ಕಲೆ ಹಾಕಿತು. ವಿಕೆಟ್ ಕಾಯ್ದುಕೊಂಡು ಅಬ್ಬರದ ಆಟವಾಡಿದ ಡು’ಪ್ಲೆಸಿಸ್ ಹಾಗೂ ವ್ಯಾಟ್ಸನ್, ಸಿಕ್ಸ್ ಹಾಗೂ ಬೌಂಡರಿಗಳ ಮೂಲಕ ಪಂಜಾಬ್ ಬೌಲರ್ ಗಳ ಬೆವರಿಳಿಸಿದರು. ಬೌಲಿಂಗ್‍ನಲ್ಲಿಯೂ ಪಂಜಾಬ್ ತಂಡವನ್ನು ಕಟ್ಟಿಹಾಕಿದ್ದ ಚೆನ್ನೈ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸುಲಭವಾಗಿ ಜಯಗಳಿಸಿತು. ಪವರ್ ಪ್ಲೇ ಮುಗಿಯುವಷ್ಟರಲ್ಲಿ ಡು’ಪ್ಲೆಸಿಸ್ 22 ಬಾಲ್‍ಗೆ 37 ರನ್ ಹಾಗೂ ವ್ಯಾಟ್ಸನ್ 20 ಬಾಲ್‍ಗೆ 23 ರನ್ ಗಳಿಸಿದ್ದರು.
ಹತ್ತನೇ ಓವರ್ ತಲುಪುವ ವೇಳೆಗೆ ಈ ಜೋಡಿ 101 ರನ್‍ಗಳನ್ನು ಕಲೆ ಹಾಕಿತ್ತು. ಇದೇ ವೇಳೆ ಓವರ್ ಮುಗಿಯುವಷ್ಟರಲ್ಲಿ ಶೇನ್ ವ್ಯಾಟ್ಸನ್ 31 ಎಸೆತಗಳಲ್ಲಿ ಮೊದಲು ಅರ್ಧ ಶತಕ ಬಾರಿಸಿದರು. ಬಳಿಕ ಡುಪ್ಲೆಸಿಸ್ ಕೂಡಾ 33 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. ನಂತರ ನಿಧಾನಕ್ಕೆ ಆಟವಾಡಿದ ಜೋಡಿ 13 ಓವರ್ ಮುಗಿಯುವಷ್ಟರಲ್ಲಿ 123 ರನ್ ಗಳಿಸಿತು.
15ನೇ ಓವರ್ ಮುಗಿಯುವ ಹೊತ್ತಿಗೆ ಇಬ್ಬರ ಭರ್ಜರಿ ಜೊತೆಯಾಟದಿಂದಾಗಿ ಬರೋಬ್ಬರಿ 150 ರನ್ ಸಿಡಿಸಿದ್ದರು.
0 comments:
Post a Comment