ಬಂಟ್ವಾಳ, ಅ. 24, 2020 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ಬಳಿ ಶುಕ್ರವಾರ ಸಂಜೆ ಕಲ್ಲಡ್ಕ ನಿವಾಸಿ, ರೌಡಿ ಶೀಟರ್ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ (27) ಎಂಬಾತನನ್ನು ಅಟ್ಟಾಡಿಸಿ ಕಡಿದು ಕೊಂದ ಆರೋಪಿ ಇನ್ನೊಬ್ಬ ರೌಡಿ ಶೀಟರ್, ಮೂಲತಃ ಕಲ್ಲಡ್ಕ ನಿವಾಸಿ, ಪ್ರಸ್ತುತ ನಂದಾವರದಲ್ಲಿ ವಾಸವಾಗಿರುವ ಖಲೀಲ್ ಯಾನೆ ಇಬ್ರಾಹಿಂ ಖಲೀಲ್ ಎಂಬಾತನನ್ನು ಗುಂಡ್ಯ ಬಳಿ ಫೈರಿಂಗ್ ನಡೆಸಿ ಬಂಧಿಸಿದ ಪೊಲೀಸರು ಪರಾರಿಯಾಗಿದ್ದ ಇನ್ನಿಬ್ಬರನ್ನು ಧರ್ಮಸ್ಥಳ ಠಾಣಾ ವ್ಯಾಪ್ತಿಯ ರೆಖ್ಯಾ ಎಂಬಲ್ಲಿ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ನಂದಾವರ ನಿವಾಸಿ ಹಫೀಝ್ ಯಾನೆ ಅಪ್ಪಿ (27) ಹಾಗೂ ಕಾರು ಚಾಲಕ ಇರ್ಶಾದ್ (26) ಎನ್ನಲಾಗಿದೆ. ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದು, ಬಂಧನದ ಬಗ್ಗೆ ಅಧಿಕೃತ ಮಾಹಿತಿ ಮಾಧ್ಯಮಗಳಿಗೆ ನೀಡಿಲ್ಲ.
0 comments:
Post a Comment