ಕುಂಪನಮಜಲು ಲೈಂಗಿಕ ಕಿರುಕುಳಕ್ಕೊಳಗಾಗಿರುವ ಬಾಲಕಿ ಕುಟುಂಬಕ್ಕೆ ಬೆಂಬಲಿಸಿದ್ದಕ್ಕೆ ಪ್ರತೀಕಾರವಾಗಿ ಹಲ್ಲೆ : ಪೊಲೀಸ್
ಬಂಟ್ವಾಳ, ಅ. 29, 2020 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಅಹಿತಕರ ಘಟನೆ ಮುಂದುವರಿದಿದ್ದು, ಕಳೆದ ಒಂದು ವಾರದ ಅವಧಿಯಲ್ಲಿ ಮೂರು ಪ್ರತ್ಯೇಕ ಘಟನೆಗಳು ನಡೆದು ಜನ ಆತಂಕಕ್ಕೀಡಾಗಿದ್ದಾರೆ.
ಕಳೆದ ಬುಧವಾರ ರಾತ್ರಿ ಬಂಟ್ವಾಳದಲ್ಲಿ ನಡೆದ ರೌಡಿಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ, ಹಾಗೂ ಶುಕ್ರವಾರ ಸಂಜೆ ನಡೆದ ಮತ್ತೋರ್ವ ರೌಡಿಶೀಟರ್ ಕಲ್ಲಡ್ಕ ಚನ್ನ ಫಾರೂಕ್ ಕೊಲೆಯ ಬಳಿಕ ಜನರ ಆತಂಕ ಕಡಿಮೆಯಾಗುವುದಕ್ಕಿಂತ ಮುಂಚಿತವಾಗಿ ಇದೀಗ ಮತ್ತೆ ಬುಧವಾರ ರಾತ್ರಿ ಫರಂಗಿಪೇಟೆಯಲ್ಲಿ ಸ್ಟುಡಿಯೋ ಒಳಗೆ ನುಗ್ಗಿದ ದುಷ್ಕರ್ಮಿಗಳು ಮಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಬುಧವಾರ ರಾತ್ರಿ ಸುಮಾರು 7.15 ರ ವೇಳೆಗೆ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ಅವರಿಗೆ ಸೇರಿದ ತೃಷಾ ಪೆÇೀಟೊ ಸ್ಟುಡಿಯೋಗೆ 4 ಮಂದಿ ಯುವಕರ ತಂಡ ಪೆÇೀಟೊ ತೆಗೆಸುವ ನೆಪದಲ್ಲಿ ಬಂದು ಕತ್ತಿಯಿಂದ ತಲೆಗೆ, ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಶೇಖರ ಪೂಜಾರಿ ಅವರು ಹಲ್ಲೆ ತಡೆಯಲು ಅಲ್ಲೇ ಇದ್ದ ಕುರ್ಚಿಯನ್ನು ಬಲವಾಗಿ ಇಬ್ಬರು ಆರೋಪಿಗಳ ಮೇಲೆ ಬೀಸಿದ್ದು, ಶೇಖರ ಪೂಜಾರಿ ಅವರಿಗೂ ಘಟನೆಯಿಂದ ಗಾಯವಾಗಿರುತ್ತದೆ. ಘಟನೆಯಿಂದ ಗಾಯಗೊಂಡ ದಿನೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚೆಗೆ ಫರಂಗಿಪೇಟೆ ಸಮೀಪದ ಕುಂಪಣಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿನೇಶ್ ಅವರು ಹೆಣ್ಣು ಮಗುವಿನ ಕಡೆಯವರಿಗೆ ಬೆಂಬಲ ನೀಡಿದ್ದ ದ್ವೇಷದಿಂದ ಈ ಹಲ್ಲೆ ಪ್ರಕರಣ ನಡೆದಿದೆ ಎಂದು ತನಿಖೆಯಿಂದ ಕಂಡುಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳ ಪೈಕಿ ಅಮೆಮಾರು ನಿವಾಸಿ ಮಹಮ್ಮದ್ ಅರ್ಷದ್ (19), ಅಬ್ದುಲ್ ರೆಹಮಾನ್ (22) ಹಾಗೂ ಮಹಮ್ಮದ್ ಸೈಪುದ್ದೀನ್ (22) ಎಂಬವರನ್ನು ಬುಧವಾರ ರಾತ್ರಿಯೇ ದಸ್ತಗಿರಿ ಮಾಡಿದ್ದು, ಇನ್ನೋರ್ವ ಆರೋಪಿ ಸವಾದ್ ಪೊಲೀಸರ ಕೈಗೆ ಸಿಕ್ಕಿಲ್ಲ. ಈತನ ಪತ್ತೆಗೆ ಪೊಲೀಸ್ ವಿಶೇಷ ತಂಡ ಬಲೆ ಬೀಸಿದ್ದು,
ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿದ್ದು, ಸೂಕ್ತ ಬಂದೋಬಸ್ತ್‍ಗೆ ಮಾರ್ಗದರ್ಶನ ನೀಡಿದ್ದಾರೆ. ಬಂಟ್ವಾಳ ಡಿವೈಸ್ಪಿ ವೆಲೆಂಟೈನ್ ಡಿ’ಸೋಜ, ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್, ಗ್ರಾಮಾಂತರ ಎಸ್ಸೈ ಪ್ರಸನ್ನ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬಂದೋಬಸ್ತ್‍ಗೆ ನೇತೃತ್ವ ನೀಡಿದ್ದಾರೆ.
0 comments:
Post a Comment