ಅ. 19 ರಂದು ಬಂಟ್ವಾಳ ಶಾಸಕರ ಕಛೇರಿಗೆ ಮುಂಭಾಗ ಧರಣಿಗೆ ತೀರ್ಮಾನ
ಬಂಟ್ವಾಳ, ಅ. 12, 2020 (ಕರಾವಳಿ ಟೈಮ್ಸ್) : ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಸರಕಾರ ಕಡೆಗಣಿಸುತ್ತಿರುವುದರ ಪರಿಣಾಮ ಜನಸಾಮಾನ್ಯರು ಗುಣಮಟ್ಟದ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಸೌಲಭ್ಯಗಳಿಲ್ಲದ ಸರಕಾರಿ ಆಸ್ಪತ್ರೆಗಳು ಜನರ ಅನಾರೋಗ್ಯಕ್ಕೆ ಪರಿಹಾರ ಒದಗಿಸಲು ವಿಫಲವಾಗಿದ್ದರೆ, ಖಾಸಗಿ ಆಸ್ಪತ್ರೆಗಳ ನಿಯಮ ಬಾಹಿರ ದುಬಾರಿ ದರಗಳು ಜನಸಾಮಾನ್ಯರ ಬದುಕುವ ಹಕ್ಕನ್ನೆ ನಿರಾಕರಿಸುತ್ತಿದೆ. ಆರೋಗ್ಯ ಕ್ಷೇತ್ರದ ಇಂತಹ ನಿರ್ಲಜ್ಜ ವ್ಯಾಪಾರೀಕರಣ ನೀತಿಯ ವಿರುದ್ದ ಆರೋಗ್ಯ ಕ್ಷೇತ್ರದ ಈ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟವನ್ನು ರೂಪಿಸಲು ಬಂಟ್ವಾಳ ತಾಲೂಕಿನ ಸಾಮಾಜಿಕ ಕಾರ್ಯಕರ್ತರ ಸಭೆ ಬಿ ಸಿ ರೋಡಿನ ಸಿಐಟಿಯು ಕಚೇರಿಯಲ್ಲಿ ನಡೆಯಿತು.
ಅ 19 ರಂದು ಬಂಟ್ವಾಳ ಶಾಸಕರ ಕಛೇರಿ ಮುಂಭಾಗ ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಸಭಾಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಬಂಟ್ವಾಳ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಇಂಟಕ್ ಜಿಲ್ಲಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ ಶೇಖರ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತೀ ಪ್ರಶಾಂತ್, ಎಐವೈಎಫ್ ಮುಖಂಡರಾದ ಸುರೇಶ್ ಕುಮಾರ್ ಬಂಟ್ವಾಳ, ಪ್ರೇಮನಾಥ್, ಜೆಡಿಎಸ್ ಮುಖಂಡ ಹಾರೂನ್ ರಶೀದ್, ನ್ಯಾಯವಾದಿಗಳಾದ ಉಮೇಶ್ ಕುಮಾರ್ ವೈ, ತುಳಸೀದಾಸ್ ವಿಟ್ಲ, ಅಬ್ದುಲ್ ಜಲೀಲ್ ನಂದಾವರ, ಕರ್ನಾಟಕ ರಾಜ್ಯ ರೈತ ಸಂಘದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಪ್ರಮುಖರಾದ ಜನಾರ್ಧನ ಕೆಸರಗದ್ದೆ, ನಿತಿನ್ ಬಂಗೇರ, ಮಹಮ್ಮದ್ ಇಕ್ಬಾಲ್ ಹಳೆಮನೆ, ರಾಜಾ ಪಲ್ಲಮಜಲು, ಪ್ರೀತಂ, ರಾಜಾ ಚೆಂಡ್ತಿಮಾರ್,ಉದಯ ಕುಮಾರ್ ಬಂಟ್ವಾಳ, ದಿನೇಶ ಆಚಾರಿ, ಕೃಷ್ಣಪ್ಪ ಪುದ್ದೊಟ್ಟು, ಅಲ್ತಾಫ್ ತುಂಬೆ, ಸಲೀಂ ಬೋಳಂಗಡಿ, ಮಹಮ್ಮದ್ ಇಸಾಕ್, ಅಬ್ದುಲ್ ಕುಂಞÂ, ಜಗನ್ನಾಥ ಬಂಟ್ವಾಳ, ದಿವಾಕರ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment