ಬಂಟ್ವಾಳ, ಅಕ್ಟೋಬರ್ 04, 2020 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ-ಕೋಡಿಮಜಲು ರಸ್ತೆ, ಸಜಿಪಮೂಡ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ರಸ್ತೆ ಕಾಮಗಾರಿ ಹಾಗೂ ಸಜಿಪಮೂಡ ಗ್ರಾಮದ ನಗ್ರಿ-ನಾಡಾರು ಕಾಲನಿ ರಸ್ತೆಗೆ ಕ್ರಮವಾಗಿ 15 ಲಕ್ಷ, 20 ಲಕ್ಷ ಹಾಗೂ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ಕಾಮಗಾರಿಯನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಜಿ.ಪಂ ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಪುರುಷೋತ್ತಮ್ ಶೆಟ್ಟಿ, ಪ್ರವೀಣ್ ಗಟ್ಟಿ, ಯಶವಂತ ದೇರಾಜೆ, ಗಣೇಶ್ ರೈ, ಜಯಶಂಕರ ಬಾಸ್ರಿತ್ತಾಯ, ವಿವೇಕ್ ಶೆಟ್ಟಿ ನಗ್ರಿಗುತ್ತು, ಯಶವಂತ ನಗ್ರಿ, ರವೀಶ್ ಶೆಟ್ಟಿ, ಸೀತಾರಾಮ ಅಗೋಳಿಬೆಟ್ಟು, ದಕ್ಷಣ್ ಮಿತ್ತಮಜಲು, ವೀರೇಂದ್ರ ಕುಲಾಲ್ ಕುಡುಮುನ್ನೂರು, ಕುಶಲ ಪೂಜಾರಿ, ರಮಾನಾಥ ರಾಯಿ, ಸುರೇಶ್ ಪೂಜಾರಿ, ಜಯಪ್ರಕಾಶ್ ಪೆರ್ವ, ಸುರೇಶ್ ಬಂಗೇರ, ಪ್ರಶಾಂತ್ ಪೂಜಾರಿ ವಿಟ್ಲುಕೊಡಿ, ಸುಬ್ರಹ್ಮಣ್ಯ ಭಟ್, ನಳಿನ್ ರೈ, ಸರ್ವಾಣೆ ಆಳ್ವ, ವೆಂಕಟರಮಣ ಐತಾಳ್, ಸೀತಾರಾಮ ಪೂಜಾರಿ, ನವೀನ ಅಂಚನ್, ಸುಮತಿ ಎಸ್., ಗಿರಿಜಾ, ಅರವಿಂದ್ ಭಟ್, ವನಜಾಕ್ಷಿ, ವಿಶ್ವನಾಥ ಕೊಟ್ಟಾರಿ, ದಯಾನಂದ ಬಿ.ಎಂ., ಮನೋಹರ, ಇಂಜಿನಿಯರ್ ಕುಶಕುಮಾರ್, ರತ್ನಾಕರ್ ನಾಡಾರು, ದೀರಜ್, ಕೃಷ್ಣಪ್ಪ ಬಂಗೇರ, ಇದಿನಬ್ಬ ನಂದಾವರ, ಪಾರೂಕ್ ನಂದಾವರ, ರೂಪೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಮಂಚಿ : ಶಾಂತಿನಗರ-ಕಂಚಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ
ಮಂಚಿ ಗ್ರಾಮದ ಶಾಂತಿನಗರ-ಕಂಚಿಲ ಎಂಬಲ್ಲಿನ ಪರಿಶಿಷ್ಟ ಪಂಗಡ ಕಾಲೊನಿಯ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಂಕ್ರೀಟಿಕರಣಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಯುವ ಮೋರ್ಚಾ ಬಂಟ್ವಾಳದ ಕಾರ್ಯದರ್ಶಿ ಪ್ರಮೋದ್ ನೂಜಿಪ್ಪಾಡಿ, ಶಕ್ತಿಕೇಂದ್ರ ಪ್ರಮುಖ ರಮೇಶ್ ಪತ್ತುಮುಡಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ ಪುದ್ದೊಟ್ಟು, ಬೂತ್ ಸಮಿತಿ ಅಧ್ಯಕ್ಷ ಪ್ರಶಾಂತ್ ಕಂಚಿಲ, ಪ್ರಭಾಕರ ಶೆಟ್ಟಿ ನಾಡಾಜೆ, ದಿನೇಶ್ ಸಾಲ್ಯಾನ್ ಮೋಂತಿಮಾರು, ಪಂಚಾಯತ್ ಮಾಜಿ ಸದಸ್ಯರಾದ ಪುಷ್ಪಾ ಎಸ್ ಕಾಮತ್, ಸುಮತಿ, ಕೃಷ್ಣಪ್ಪ ಬಂಗೇರ, ಕೇಶವ ರಾವ್ ನೂಜಿಪ್ಪಾಡಿ, ಬೂತ್ ಸಮಿತಿ ಕಾರ್ಯದರ್ಶಿ ರಾಜೇಶ್ ನೂಜಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment