ದುಬೈ, ಅ. 26, 2020 (ಕರಾವಳಿ ಟೈಮ್ಸ್) : ದುಬೈಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ನಾಕೌಟ್ ಪಂದ್ಯ, ಫೈನಲ್ ಪಂದ್ಯದ ದಿನಾಂಕ ಮತ್ತು ಸ್ಥಳಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ.
ಪ್ಲೇಆಫ್ ಮತ್ತು ಫೈನಲ್ ಪಂದ್ಯವು ನವೆಂಬರ್ 5 ರಿಂದ 10ರ ನಡುವೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ನವೆಂಬರ್ 10 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಫೈನಲ್ ಪಂದ್ಯವನ್ನು ಆಯೋಜಿಸುವುದರೊಂದಿಗೆ ಐಪಿಎಲ್ 2020 ಮುಕ್ತಾಯ ಕಾಣಲಿದೆ.
ಡ್ರೀಮ್ 11 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು 2020 ರ ನವೆಂಬರ್ 5 ರಿಂದ 10 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಕ್ವಾಲಿಫೈಯರ್ 1 ನವೆಂಬರ್ 5 ರಂದು ದುಬೈನಲ್ಲಿ ನಡೆದರೆ, ನ. 6 ರಂದು ಎಲಿಮಿನೇಟರ್ ಹಾಗೂ ನ. 8 ರಂದು ಕ್ವಾಲಿಫೈಯರ್ 2 ಪಂದ್ಯ ಅಬುಧಾಬಿಯಲ್ಲಿ ನಡೆಯಲಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ದುಬೈಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ಐಪಿಎಲ್ 2020 ರ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಎಲ್ಲಾ ಮೂರು ತಂಡಗಳು ತಲಾ 14 ಅಂಕಗಳನ್ನು ಹೊಂದಿದ್ದು, ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಸ್ಥಾನ ನಿರ್ಧರಿಸಿಕೊಳ್ಳಲಿದೆ.
0 comments:
Post a Comment