ಬಂಟ್ವಾಳ, ಸೆ. 09, 2020 (ಕರಾವಳಿ ಟೈಮ್ಸ್) : ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ) ಬಂಟ್ವಾಳ ತಾಲೂಕು ಇದರ ನೂತನ ಅಧ್ಯಕ್ಷರಾಗಿ ಶೇಖ್ ಸುಭಾನ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಭವನದಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಒಕ್ಕೂಟದ ಅಧ್ಯಕ್ಷ ಶೇಖ್ ಸುಬಾನ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೀಪಾಲಾಂಕಾರ ಮಾಲಕ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾಗಿ ಮಹಮ್ಮದ್ ತಾಹಿರಾ, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬನಾರಿ, ಜೊತೆ ಕಾರ್ಯದರ್ಶಿಯಾಗಿ ಲಿಂಗಪ್ಪ ಡಿ.ಜೆ, ಉದಯ ಬಂಟ್ವಾಳ, ಕೋಶಾಧಿಕಾರಿಯಾಗಿ ಸಂತೋಷ್ ಕನ್ಯಾನ, ಗೌರವ ಸಲಹೆಗಾರರಾಗಿ ರಾಜಶೇಖರ ಶೆಟ್ಟಿ, ಧನ್ ರಾಜ್ ಸಾಯಿಜನರೇಟರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಶಾಂತ್ ಕುಂಡಡ್ಕ, ವಸಂತ ಮಾಣಿ, ನಾರಾಯಣ ಕುಕ್ಕಾಜೆ, ಜಯಪ್ರಕಾಶ್, ಪ್ರಶಾಂತ್ ಅಜಿಲಮೊಗರು, ದಿವ್ಯರಾಜ್ ಹರೀಶ್, ಸಂತೋಷ್ ಸುವರ್ಣ ಕುರಿಯಾಳ, ಜಯಕೃಷ್ಣ ಕನ್ಯಾನ, ಸಂಘಟನ ಕಾರ್ಯದರ್ಶಿಗಳಾಗಿ ಸತೀಶ್ ವಗ್ಗ, ಗಂಗಾಧರ ಮಂಚಿ ಹಾಗೂ ಕುಶಲ್ ರಾಜ್ ಪಾಣೆಮಂಗಳೂರು ಅವರನ್ನು ಆರಿಸಲಾಯಿತು.
ಸಂತೋಷ್ ಕನ್ಯಾನ ಸ್ವಾಗತಿಸಿ, ಕಾರ್ಯದರ್ಶಿ ಇಸ್ಮಾಯಿಲ್ ಬನಾರಿ ವರದಿ ಮಂಡಿಸಿದರು.ಕೋಶಾಧಿಕಾರಿ ಸಂತೋಷ್ ಕನ್ಯಾನ ಲೆಕ್ಕ ಪತ್ರ ಮಂಡಿಸಿದರು.
0 comments:
Post a Comment