ಬಂಟ್ವಾಳ, ಸೆ. 08, 2020 (ಕರಾವಳಿ ಟೈಮ್ಸ್) : ಕಳ್ಳಿಗೆ ವಲಯ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಹಾಗೂ ಗ್ರಾಮಾಭಿವೃದ್ಧಿ ಸಂಘ ಕಳ್ಳಿಗೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಯುಷ್ಮಾನ್ ಭಾರತ್ ಯೋಜನೆಯ ಉಚಿತ ನೋಂದಾವಣಿ ಶಿಬಿರ ಮತ್ತು ಕಾರ್ಡ್ ವಿತರಣಾ ಸಮಾರಂಭ ನಡೆಯಿತು.
ಮಾಜಿ ಸಚಿವ ಬಿ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಬ್ರಹ್ಮರಕೊಟ್ಲು ಭಜನಾ ಮಂದಿರದ ಅಧ್ಯಕ್ಷ ಶಶಿಧರ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸದಸ್ಯ ಶಿವಪ್ರಸಾದ್, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಎಪಿಎಂಸಿ ಸದಸ್ಯ ದಿವಾಕರ ಪಂಬದಬೆಟ್ಟು. ಗ್ರಾ ಪಂ ಮಾಜಿ ಸದಸ್ಯರಾದ ನಾರಾಯಣ ನಾಯ್ಕ್, ಮದುಸೂಧನ್, ಜಗದೀಶ್ ಕುಂಜತ್ತೂರು, ವಿಜಯ್ ಡಿ’ಸೋಜ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment