ಮಂಗಳೂರು (ಕರಾವಳಿ ಟೈಮ್ಸ್) : ನಗರದ ಕಿನ್ನಿಗೋಳಿ ಸಮೀಪದ ಕರ್ನಿರೆ ಶಾಂಭವಿ ನದಿಗೆ ಈಜಲು ಇಳಿದ ಮೂರು ಮಂದಿ ಯುವಕರ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಮೃತನನ್ನು ಬೆಂಗಳೂರು ನಿವಾಸಿ ಅನಿಲ್ (23) ಎಂದು ಹೆಸರಿಸಲಾಗಿದೆ. 7 ಮಂದಿ ಯುವಕರು ಬೆಂಗಳೂರಿನಿಂದ ಆಗಮಿಸಿದ್ದರು. ಕರ್ನಿರೆ ಬಳಿಯ ಶಾಂಭವಿ ನದಿಯ ಕಡೆಗೆ ಬಂದಿದ್ದು, ನದಿ ನೀರಿನಲ್ಲಿ ಈಜಾಡಲು ಮೂರು ಮಂದಿ ನೀರಿಗಿಳಿದ್ದಿದ್ದರು. ಈ ವೇಳೆ ಈಜಾಡುತ್ತಿದ್ದ ಮೂವರು ನೀರಿನ ಸೆಳೆತಕ್ಕೆ ಸಿಕ್ಕಿದ್ದು, ಕೊಚ್ಚಿ ಹೋಗಿದ್ದರು. ತಕ್ಷಣ ಸ್ಥಳೀಯರು ನೀರಿಗಿಳಿದು ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ಅನಿಲ್ ಸ್ಥಳೀಯರ ಕೈಗೆ ಸಿಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕೆ ಮೂಲ್ಕಿ ಠಾಣಾ ಪೆÇಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment