ಬಂಟ್ವಾಳ (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಪೇರಿಮಾರ್ ಶಾಖೆ ಹಾಗೂ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ಇವರ ಜಂಟಿ ನೇತೃತ್ವದಲ್ಲಿ ಭಾರತ ಸರ್ಕಾರದ ಆರೋಗ್ಯ ಇಲಾಖೆ ಉಚಿತ ಚಿಕಿತ್ಸೆಯ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ನೋಂದಣೆ ಅಭಿಯಾನ ಬುಧವಾರ ನಡೆಯಿತು.
ಪುದು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಹಾಶೀರ್ ಪೇರಿಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಪೇರಿಮಾರ್ ಶಾಖಾಧ್ಯಕ್ಷ ನಝೀರ್ ಪೇರಿಮಾರ್ ಅಧ್ಯಕ್ಷತೆ ವಹಿಸಿದ್ದರು. ಪೇರಿಮಾರ್ ಮಸ್ಜಿದುಳ್ ಖಿಳ್‍ರ್ ಜುಮಾ ಮಸೀದಿ ಅಧ್ಯಕ್ಷ ಪಿ.ಎಂ. ಮಹಮ್ಮದ್ ಶಾಫಿ, ಕೋಶಾಧಿಕಾರಿ ಹುಸೈನ್ ಬಿ. ಬಾಲ್ದಬೋಟ್ಟು, ಮಂಗಳೂರು ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಶೌಕತ್ ಅಲಿ ಮಾರಿಪಳ್ಳ, ಎಸ್ಸೆಸ್ಸೆಫ್ ಪೇರಿಮಾರ್ ಶಾಖಾ ಉಪಾಧ್ಯಕ್ಷ ಅನ್ಸಾರ್ ಪೇರಿಮಾರ್, ಜೊತೆ ಕಾರ್ಯದರ್ಶಿ ಉನೈಸ್ ಬಿ. ಬಾಲ್ದಬೋಟ್ಟು, ಕೋಶಾಧಿಕಾರಿ ಮುಸ್ತಾಫ ಉಜಿರೆ ಪೇರಿಮಾರ್, ಎಸ್ಸೆಸ್ಸೆಫ್ ಪೇರಿಮಾರ್ ಶಾಖಾ ಸದಸ್ಯರಾದ ಪಿ.ಎಂ. ಸಿರಾಜ್ ಪೇರಿಮಾರ್, ಇಕ್ಬಾಲ್ ಸ್ವಾದಿಕ್ ಬಾಲ್ದಬೊಟ್ಟು, ಎಸ್.ಕೆ. ರಿಯಾಝ್ ಪೇರಿಮಾರ್, ಕೆ.ಸಿ.ಎಫ್ ಅಲ್-ಜುಬೈಲ್ ಘಟಕದ ಸದಸ್ಯರಾದ ನಿಯಾಝ್ ಅಹ್ಮದ್ ಪೇರಿಮಾರ್, ಇಮ್ರಾನ್ ದೇವಸ್ಯ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment