ವಿಟ್ಲ, ಸೆ. 26, 2020 (ಕರಾವಳಿ ಟೈಮ್ಸ್) : ಅಕ್ರಮವಾಗಿ ರಕ್ತಚಂದನ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪುತ್ತೂರು ತಾಲೂಕು, ಸವಣೂರು ಗ್ರಾಮದ ನಿವಾಸಿ ಅಬ್ಬು ಚಾಪಳ್ಳ ಅಲಿಯಾಸ್ ಉಮ್ಮರ್ ಫಾರೂಕ್ ಎಂದು ಹೆಸರಿಸಲಾಗಿದೆ. ಶನಿವಾರ ಬೆಳಿಗ್ಗೆ 11 ಗಂಟೆಯ ವೇಳೆಗೆ ವಿಟ್ಲ ಕಸಬ ಎಂಬಲ್ಲಿ ಅನುಮಾನಸ್ಪದವಾಗಿ ಕಂಡ ಈತನನ್ನು ವಿಟ್ಲ ಪೆÇಲೀಸರು ವಿಚಾರಿಸಿದಾಗ ಆತನ ಬಳಿ ಪ್ಲಾಸ್ಟಿಕ್ ಚೀಲವೊಂದರಲ್ಲಿ 24,200/- ರೂಪಾಯಿ ಮೌಲ್ಯದ 12.100 ಕಿಲೋ ಗ್ರಾಂ ತೂಕದ ರಕ್ತ ಚಂದನದ ತುಂಡು ಪತ್ತೆಯಾಗಿದೆ. ಯಾವುದೇ ಸಾಗಾಟ ಪರವಾನಗಿ ಹೊಂದಿರದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದಾರೆ. ಸಯ್ಯದ್ ಎಂಬಾತನಿಂದ ಈತ ಇದನ್ನು ಪಡೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಕಲಂ 62, 80 ಕೆಎಫ್ ಆಕ್ಟ್ ಮತ್ತು 144 ಕೆಎಫ್ ರೂಲ್ಸ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment