ಮಂಗಳೂರು, ಸೆ. 19, 2020 (ಕರಾವಳಿ ಟೈಮ್ಸ್) : ನಗರದ ಕುಳಾಯಿ ನಿವಾಸಿ, ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ (30) ಹಾಗೂ ಸುರತ್ಕಲ್ ನಿವಾಸಿ ಅಕೀಲ್ ನೌಶೀಲ್ (28) ಎಂಬವರನ್ನು ನಿಷೇಧಿತ ಎಂಡಿಎಂಎ (ಮೀಥಿಲೀನ್ ಡ್ರಾಕ್ಸಿ ಮೆಥಾಂಫೆಟಮೈನ್) ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೆÇಲೀಸ್ ಆಯುಕ್ತ ವಿಕಾಸ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಗಳೂರು ಸಿಸಿಬಿ ಪೆÇೀಲಿಸರು, ಇಕಾನಾಮಿಕ್ ಆಂಡ್ ನಾರ್ಕೋಟಿಕ್ ಠಾಣಾ ಪೆÇಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಶನಿವಾರ ಬೆಳಗ್ಗಿನ ಜಾವ ಮಂಗಳೂರು ನಗರದ ಕದ್ರಿ ಪದವು ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಮುಂಬೈಯಿಂದ ಡ್ರಗ್ಸ್‍ಗಳನ್ನು ತರಿಸಿ ಆರೋಪಿಗಳು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಬಂಧಿತರಿಂದ 1 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ, ಬಜಾಜ್ ಡಿಸ್ಕವರ್ ಬೈಕ್, ಎರಡು ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಆರೋಪಿಗಳಿದ್ದು, ಎಲ್ಲರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದವರು ಹೇಳಿದರು.
ಬಂಧಿತ ಅಕೀಲ್ ನೌಶೀಲ್ ವಿದೇಶದಲ್ಲಿ ಸೇಫ್ಟಿ ಆಫೀಸರ್ ನೌಕರಿಯಲ್ಲಿದ್ದ. ಕಳೆದ ವರ್ಷ ಊರಿಗೆ ಬಂದ ಈತ ಮುಂಬೈ ಹಾಗೂ ಬೆಂಗಳೂರಿನಿಂದ ಡ್ರಗ್ಸ್ ಖರೀದಿಸಿ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಕಿಶೋರ್ ಅಮನ್ ಶೆಟ್ಟಿ ಪ್ರಸಿದ್ಧ ಡ್ಯಾನ್ಸರ್ ಮತ್ತು ನೃತ್ಯ ಸಂಯೋಜಕರಾಗಿದ್ದು, ಹಿಂದಿ ಚಿತ್ರಗಳಲ್ಲಿ ನಟಿಸಿ ಸುವರ್ಣ ಕನ್ನಡ ಚಾನಲ್‍ನ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಾತ.
ಅಕೀಲ್ ಜೊತೆಗೆ, ಕಿಶೋರ್ ಕೂಡ ಎಂಡಿಎಂಎಯನ್ನು ಮಾರಾಟ ಮಾಡುವಲ್ಲಿ ಭಾಗಿಯಾಗಿದ್ದಾನೆ. ಇಬ್ಬರನ್ನೂ ಮಾದಕ ದ್ರವ್ಯ ಸೇವನೆ ಮತ್ತು ಬಳಕೆಗಾಗಿ ಬಂಧಿಸಲಾಗಿದೆ. ಇಬ್ಬರ ವಿರುದ್ದ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ನಾವು ಮುಂಬೈಗೆ ಡ್ರಗ್ಸ್ ನಂಟಿರುವ ಬಗ್ಗೆ ತನಿಖೆ ಮಾಡುತ್ತೇವೆ ಮತ್ತು ಸಂಪೂರ್ಣ ಲಿಂಕ್ ಅನ್ನು ಪತ್ತೆ ಮಾಡುತ್ತೇವೆ. ಅದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪಾರ್ಟಿಗಳಲ್ಲಿ ಪಾಲ್ಗೊಳ್ಳುವಿಕೆಯ ಮಾಹಿತಿಯೂ ನಮ್ಮಲ್ಲಿದೆ ಮತ್ತು ನಾವು ಅದನ್ನು ಮತ್ತಷ್ಟು ಪರಿಶೀಲಿಸುತ್ತೇವೆ ಎಂದವರು ಹೇಳಿದರು. ಈ ಪ್ರಕರಣವನ್ನು ಎನ್‍ಡಿಪಿಎಸ್ ಕಾಯ್ದೆಯಡಿ ದಾಖಲಿಸಲಾಗಿದ್ದು, ಎಲ್ಲ ಅಂಶಗಳನ್ನು ತನಿಖೆ ಮಾಡಲಾಗುವುದು. ನಮಗೆ ಈಗಾಗಲೇ ಕೆಲವು ಸುಳಿವು ದೊರೆತಿದೆ ಎಂದು ಪೆÇಲೀಸ್ ಆಯುಕ್ತರು ತಿಳಿಸಿದ್ದಾರೆ.
ಪೆÇಲೀಸ್ ಕಮಿಷನರ್ ವಿಕಾಸ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಆರ್ ನಾಯಕ್, ಆರ್ಥಿಕ ಮಾದಕವಸ್ತು ತನಿಖಾಧಿಕಾರಿ ರಾಮಕೃಷ್ಣ, ಸಿಸಿಬಿ ಪಿಎಸ್‍ಐ ಕಬ್ಬಲ್‍ರಾಜ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
0 comments:
Post a Comment