ಬೆಂಗಳೂರು, ಸೆ. 17, 2020 (ಕರಾವಳಿ ಟೈಮ್ಸ್) : 2020ನೇ ಸಾಲಿನ 2ನೇ ಎರಡನೇ ವರ್ಷದ / ಮೂರನೇ ಸೆಮಿಸ್ಟರ್ ಲ್ಯಾಟರಲ್ ಎಂಜಿನಿಯರಿಂಗ್ ಪ್ರವೇಶಾತಿಗೆ ನಡೆಸಲ್ಪಡುವ ಡಿಸಿಇಟಿ ಪರೀಕ್ಷೆಯನ್ನು ಅಕ್ಟೋಬರ್ 14 ರಂದು ನಡೆಸುವುದಾಗಿ ವೇಳಾಪಟ್ಟಿ ಪರಿಷ್ಕರಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಆಗಸ್ಟ್ 8 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಕೋವಿಡ್ ಕಾರಣದಿಂದಾಗಿ ಅಕ್ಟೋಬರ್ 10 ರಂದು ನಡೆಸುವುದಾಗಿ ಪ್ರಾಧಿಕಾರ ತಿಳಿಸಿತ್ತು. ಇದೀಗ ಈ ದಿನಾಂಕಗಳಂದು ಕೆಲ ವಿಶ್ವವಿದ್ಯಾನಿಲಯಗಳ ಹಾಗೂ ಇತರ ಪ್ರಾದಿಕಾರಗಳ ಪರೀಕ್ಷೆ ನಿಗದಿಯಾಗಿರುವುದರಿಂದ ಸರಕಾರದ ನಿರ್ದೇಶನದಂತೆ ಡಿಸಿಇಟಿ ಪರೀಕ್ಷೆಯನ್ನು ಮತ್ತೆ ಪರಿಷ್ಕರಿಸಿ ಅ. 14 ರಂದು ನಡೆಸುವುದಾಗಿ ಪ್ರಾಧಿಕಾರ ಪ್ರಕಟಿಸಿದೆ.
ಅದೇ ರೀತಿ ಆನ್ ಲೈನ್ ಅರ್ಜಿ ಸಲ್ಲಿಸಲು ಬಾಕಿ ಇರುವ ಹಾಗೂ ಶುಲ್ಕ ಪಾವತಿಗೆ ಬಾಕಿ ಇರುವ ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶ ಕಲ್ಪಿಸಲಾಗಿದ್ದು, ಸೆ. 16 ರ ಸಂಜೆ 7.30ರ ನಂತರ ಸೆ. 21ರ ಸಂಜೆ 5.30ರವರೆಗೆ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸೆ. 22 ರ ಒಳಗೆ ಶುಲ್ಕ ಪಾವತಿಗೆ ಅವಕಾಶ ಇದ್ದು, ಈಗಾಗಲೇ ಆನ್ ಲೈನ್ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಗೆ ಬಾಕಿ ಇರುವ ವಿದ್ಯಾರ್ಥಿಗಳಿಗೂ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment