ಬಂಟ್ವಾಳ ಸೆ. 14, 2020 (ಕರಾವಳಿ ಟೈಮ್ಸ್) : ಸರಪಾಡಿ ವಲಯ ಕಾಂಗ್ರೆಸ್ ಹಾಗೂ ಪೆರಿಯಪಾದೆ ಬೂತ್ ಕಾಂಗ್ರೆಸ್ ಮತ್ತು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ) ಇವುಗಳ ಜಂಟಿ ಸಂಯುಕ್ತ ಆಶ್ರಯದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಹುಟ್ಟು ಹಬ್ಬದ ಅಂಗವಾಗಿ ‘ನಮ್ಮೂರ ಹೆಮ್ಮೆ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ಸರಪಾಡಿಯಲ್ಲಿ ನಡೆಯಿತು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳಿಗೆ ಮಾಜಿ ಸಚಿವ ರಮಾನಾಥ ರೈ ಸನ್ಮಾನಿಸಿದರು. ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತಾ.ಪಂ. ಸದಸ್ಯೆ ಸ್ವಪ್ನ ವಿಶ್ವನಾಥ್, ಪಂಚಾಯತ್ ಮಾಜಿ ಸದಸ್ಯರಾದ ಧರ್ಣಪ್ಪ ಪೂಜಾರಿ, ವಿನ್ಸೆಂಟ್ ಪಿಂಟೋ, ಚಂದ್ರಹಾಸ ನಾಯ್ಕ್, ಬಾಲಕೃಷ್ಣ ಪೂಜಾರಿ, ವಿಶ್ವನಾಥ್ ಪೂಜಾರಿ, ಪುರುಷೋತ್ತಮ ವಿ. ಬಂಗೇರ, ಸುವರ್ಣ ಕುಮಾರ್ ಜೈನ್, ಹುಸೇನ್ ಪೆರಿಯಪಾದೆ, ಎನ್.ಎಸ್.ಯು.ಐ. ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಕಾರ್ಯದರ್ಶಿ ಬಾತಿಷ್ ಅಳಕೆಮಜಲು, ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅಂಕುಶ್ ಶೆಟ್ಟಿ, ಕಾರ್ಯದರ್ಶಿ ಮುಹಮ್ಮದ್ ಶಫೀಕ್, ಸಾಮಾಜಿಕ ಜಾಲತಾಣ ಸಂಯೋಜಕ ನಜೀಬ್ ಮಂಚಿ ಹಾಗೂ ಮುಹಮ್ಮದ್ ಸಹಝ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment