ವಿಟ್ಲ, ಸೆ. 22, 2020 (ಕರಾವಳಿ ಟೈಮ್ಸ್) : ವಿಟ್ಲಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳವಾರ ವಿಟ್ಲ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಮಂಗಳವಾರ ಅಪರಾಹ್ನ 2.30 ರ ವೇಳೆಗೆ ಕಡಂಬುವಿನಲ್ಲಿ ವಿಟ್ಲಪಡ್ನೂರು ಗ್ರಾಮದ ನಿವಾಸಿಗಳಾದ ಸುವರ್ಣ ನಾಯ್ಕ್ ಹಾಗೂ ಮಹಮ್ಮದ್ ಶರೀಫ್ ಎಂಬವರು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಟೆಟ್ರಾ ಪ್ಯಾಕೇಟ್‍ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ವಶದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಠಾಣಾ ಎಸೈ ನೇತೃತ್ವದ ಪೊಲೀಸರು 3,360/- ಮೌಲ್ಯದ 8.640 ಲೀಟರ್ ಅಂದರೆ ಒಟ್ಟು ತಲಾ 90 ಎಂ.ಎಲ್. ಮದ್ಯ ತುಂಬಿದ 96 ಟೆಟ್ರಾ ಪ್ಯಾಕೇಟ್‍ಗಳ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಕಲಂ 14 ಜೊತೆಗೆ 32(1), ಕಲಂ 15 ಜೊತೆಗೆ 32 (2) ಎ ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
0 comments:
Post a Comment