ಉಪ್ಪಿನಂಗಡಿ, ಸೆ. 25, 2020 (ಕರಾವಳಿ ಟೈಮ್ಸ್) : ಪತ್ನಿ ಹಾಗೂ ಸಂಬಂಧಿ ಮೇಲೆ ಆಸಿಡ್ ಎರಚಿದ ಪತಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ನೆಲ್ಯಾಡಿ ಕೊಣಾಲು ಗ್ರಾಮದ ನಿವಾಸಿ ಶ್ರೀಮತಿ ಶೈನಿ (32) ಹಾಗೂ ಅವರ ಪತಿ ಬಿಜು ಥೋಮಸ್ ಎಂಬವರ ಜೊತೆ ಮನಸ್ತಾಪವಿದ್ದು, ಸೆ. 24 ರಂದು ಶೈನಿ ತನ್ನ ಸಂಬಂಧಿ ಝಾನ್ಸಿ ಜೊತೆ ನೆಲ್ಯಾಡಿ ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿಗೆ ರಬ್ಬರ್ ಟ್ಯಾಪಿಂಗ್ ಮಾಡಲು ತೆರಳುತ್ತಿದ್ದಾಗ ಆರೋಪಿ ಬಿಜು ಥೋಮಸ್ ಇಬ್ಬರ ಮೇಲೆ ಆಸಿಡ್ ಎರಚಿದ್ದ. ಗಂಭೀರ ಗಾಯಗೊಂಡ ಶೈನಿ ಹಾಗೂ ಝಾನ್ಸಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಪರಾರಿಯಾಗುವ ಉದ್ದೇಶದಿಂದ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಬಂದಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಯು ಕೌಟುಂಬಿಕ ಕಲಹಕ್ಕೆ ಸಂಭಂದಿಸಿದ ದ್ವೇಷದಿಂದ ಕೊಲ್ಲುವ ಉದ್ದೇಶದಿಂದ ಈ ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ದ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಕಲಂ 341, 504, 506, 326(ಎ), 307 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
0 comments:
Post a Comment