ಒಬ್ಬ ವಿದ್ಯಾರ್ಥಿ ಉತ್ತಮವಾಗಿ ಬೆಳೆದರು, ಕೆಟ್ಟ ದಾರಿಯಲ್ಲಿ ನಡೆದರು ಎಲ್ಲದಕ್ಕೂ ನೇರವಾಗಿ ಶಿಕ್ಷಕರನ್ನೇ ತೋರಿಸುತ್ತಾರೆ. ಯಾವ ಶಿಕ್ಷಕ ಕೂಡ ತಮ್ಮ ವಿದ್ಯಾರ್ಥಿಗಳನ್ನು ಕೆಟ್ಟ ದಾರಿಗೆ ತಲುಪಿಸಲು ಇಷ್ಟಪಡಲ್ಲ. ಶಿಕ್ಷಕ ಎಂಬುದು ಒಂದು ಹುದ್ದೆಯಾದರೂ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಪೆÇೀಷಕರಿಗಿಂತ ಶಿಕ್ಷಕರೆ ಮಕ್ಕಳನ್ನು ಹೆಚ್ಚು ಸಮಯ ನೋಡಿಕೊಳ್ಳುತ್ತಾರೆ. ಅಂದು ಗುರು ಕೊಟ್ಟ ಪೆಟ್ಟು ಯಾಕಾಗಿ ಎಂದು ಪ್ರತಿಯೊಬ್ಬ ಕೂಡ ಸ್ವತಃ ಕಾಲಿನ ಮೇಲೆ ನಿಂತಾಗ ಅರ್ಥೈಸುತ್ತಾನೆ. ಶಿಕ್ಷಕರು ಅವರಿಗಿಂತ ನಮ್ಮ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಬಾಳಬೇಕೆಂದು ಶ್ರಮ ಪಡುತ್ತಿರುತ್ತಾರೆ. ಓರ್ವ ಉತ್ತಮ ಶಿಕ್ಷಕ ಎಲ್ಲಿ ಇರುತ್ತಾನೊ ಅಲ್ಲಿ ಯಾವ ಕೆಟ್ಟ ಪರಿಣಾಮ ಬೀರುವುದಿಲ್ಲ. ಶಿಕ್ಷಕರು-ವಿದ್ಯಾರ್ಥಿಗಳು ಉತ್ತಮ ಸ್ನೇಹಿತರಂತೆ ಜೀವಿಸಲು ಸಹಕಾರಿಯಾಗುತ್ತವೆ. ಹಳೆ ಕಾಲದ ಇಂಜಿನ್‍ಗಳು ಉತ್ತಮವಾಗಿದೆ ಈವಾಗ ಬರುವಂತಹ ಇಂಜಿನ್ ಕೆಲವು ದಿನಗಳಷ್ಟೆ ಎಂಬಂತೆ ಇಂದಿನ ಕೆಲವು ಶಿಕ್ಷಕರು ಕೂಡ ಇದ್ದಾರೆ. ಶಿಕ್ಷಕರು ನೀಡಿದ ಕೊಡುಗೆಗಳು ಮತ್ತು ಪ್ರಯತ್ನಗಳು ಎಂದಿಗೂ ಗಮನಕ್ಕೆ ಬರುವುದಿಲ್ಲ. ಅವರು ಕೊಟ್ಟ ಅಕ್ಷರ ನಮ್ಮ ಜೀವನದ ದಾರಿಯಾದರೂ ಎತ್ತರದ ಮೆಟ್ಟಿಲುಗಳನ್ನು ಏರಿದಾಗ ಮರೆತು ಬಿಡುವವರೆ ಹೆಚ್ಚು. ಅದೇ ಒಬ್ಬ ವ್ಯಕ್ತಿ ಕೆಟ್ಟವನಾದರೆ ನಿನ್ನ ಶಿಕ್ಷಕ ಯಾರು ಎಂದೆಲ್ಲ ಪ್ರಶ್ನಿಸುತ್ತಾರೆ.
ಸೆಪ್ಟೆಂಬರ್ 5ನೇ ದಿನದಂದು ನಾವುಗಳು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ನಾವು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ. ಅವರು ಅನೇಕ ಉತ್ತಮ ಗುಣಗಳು ಮತ್ತು ಗುಣ ಲಕ್ಷಣಗಳನ್ನು ಹೊಂದಿದ್ದಾರೆ. ಅವರಂತೆಯೇ ನಮ್ಮ ಶಿಕ್ಷಕರು ಕೂಡ. ಅವರು ಕೊಟ್ಟ ವಿದ್ಯೆ ಇಂದು ನಮ್ಮ ಜೀವನದ ಭವಿಷ್ಯಕ್ಕೆ ದಾರಿ ದೀಪವಾಗಿವೆ. ಅವರೊಂದಿಗೆ ಕಳೆದ ಸಮಯ ಮತ್ತು ಕೃತಜ್ಞತೆಯು ವ್ಯಕ್ತಪಡಿಸಿದ್ದಾಗ ಶಿಕ್ಷಕರನ್ನು ಸಂತೋಷ ಮತ್ತು ಹೆಮ್ಮೆ ಪಡುವಂತೆ ಮಾಡುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅವರ ಕೊಡುಗೆಯನ್ನು ಗುರುತಿಸುವುದು ಬಹಳ ಮುಖ್ಯ. ಇಂತಹ ಅಧ್ಬುತ ದಿನವನ್ನು ನಮ್ಮ ಹುಟ್ಟು ಹಬ್ಬದ ದಿನಕ್ಕಿಂತಲು ಹೆಚ್ಚಾಗಿ ಆಚರಿಸಬೇಕಾಗುತ್ತವೆ. ನಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯು ಶಿಕ್ಷಕರ ಶ್ರಮವಿದೆ. ಆದರೆ ಇಂದು ಕೆಲವೊಂದು ದುಷ್ಟರ ಶಕ್ತಿಯಿಂದ ಶಿಕ್ಷಕರನ್ನೆ ಹೆದರಿಸುತ್ತ ಬೀದಿಗೆ ಎಸೆಯುವಂತಹ ಕೆಲಸಕ್ಕೆ ಕೈ ಹಾಕುತ್ತಿರುವುದರಿಂದ ಶಿಕ್ಷಕರು ಮೌನವಾಗಿ ಜೀವನ ನಡೆಸಬೇಕಾಗಿದೆ. ಅದು ಅಲ್ಲದೆ ಸರಿಯಾದ ವೇತನ ಕೂಡ ಸಿಗದೆ ಇರುವುದರಿಂದ ಇಂದಿನ ಪೀಳಿಗೆಯವರು ಶಿಕ್ಷಕ ಹುದ್ದೆಯನ್ನು ದೂರ ಮಾಡುವಂತಹ ಸ್ಥಿತಿಗಳು ನಿರ್ಮಾಣವಾಗಿವೆ. ನೀನು ಏನಾಗಬೇಕೆಂದು ಇಂದಿನ ಪೀಳಿಗೆಯವರಲ್ಲಿ ಕೇಳಿ ನೋಡಿ, ಅಪ್ಪಿ ತಪ್ಪಿ ಕೂಡ ನಾನೋರ್ವ ಶಿಕ್ಷಕನಾಗಬೇಕು ಎಂದು ಹೇಳುವುದಿಲ್ಲ. ಅವರ ದೃಷ್ಠಿಯೇ£ದ್ದರೂ ಇಂಜಿನಿಯರೋ, ಡಾಕ್ಟರಾಗುವ ಗುರಿಯತ್ತ ಪಯಣ ಬೆಳೆಸಿರುತ್ತದೆ. ಹೀಗೆ ಎಲ್ಲರೂ ಶಿಕ್ಷಕ ವೃತ್ತಿಯಿಂದ ದೂರ ಉಳಿದರೆ ದೇಶದ ಸ್ಥಿತಿ ಏನಾಗಬೇಡ? ಪ್ರತಿಷ್ಠಿತ ಕಾಲೇಜು ಶಿಕ್ಷಕರನ್ನು ಬಿಡಿ, ಅವರಿಗೆ ಲಕ್ಷಗಟ್ಟಲೆ ಸಂಬಳ ಸವಲತ್ತು ಎಲ್ಲವೂ ದೊರೆಯುತ್ತದೆ. ಆದರೆ ಸಾಮಾನ್ಯ ಶಿಕ್ಷಕರ ಪಾಡು ಅಂದುಕೊಂಡಷ್ಟು ಸುಲಭವಲ್ಲ. ಸರಕಾರಿ ಕೆಲಸವೆಂದರೆ ಜೀವನದಲ್ಲಿ ಸೆಕ್ಯೂರ್ಡ್ ಎಂಬ ಭಾವನೆ ಮೂಡುತ್ತದೆ. ಆದರೆ ಶಿಕ್ಷಕ ವೃತ್ತಿಗೆ ಹಾಗಲ್ಲ, ಅದರಲ್ಲಿಯೂ ಇಂದಿನ ಕೆಲವು ಶಿಕ್ಷಕರ ಸ್ಥಿತಿ ಉತ್ತಮವಾಗಿಲ್ಲ ಎಂಬುದಂತೂ ಸತ್ಯ.
ಶಿಕ್ಷಣದ ಗುಣಮಟ್ಟ, ಶಿಕ್ಷಕರ ಮೌಲ್ಯಗಳೂ ಸಹ ಕಡಿಮೆಯಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಸರಕಾರದ ಸರಿಯಾದ ಸವಲತ್ತುಗಳು ಸಿಗದೆ ಇರುವುದರಿಂದ ಶಿಕ್ಷಕರು ಹುದ್ದೆಗೆ ರಾಜೀನಾಮೆ ನೀಡಿ ವಿದ್ಯಾರ್ಥಿಗಳ ಭವಿಷ್ಯ ಅರ್ಧ ದಾರಿಯಲ್ಲಿ ಮೊಟಕುಗೊಳ್ಳುತ್ತಿವೆ. ಏನೇ ಆದರು ನಮ್ಮ ಶಿಕ್ಷಕರು ಪಡುವಂತಹ ಕಷ್ಟಗಳನ್ನು ನೆನಸಿಕೊಳ್ಳಲು ಸಾಧ್ಯವಿಲ್ಲ. ಶಾಲಾ ದಿನಗಳಲ್ಲಿ ಕೆಲವೊಮ್ಮೆ ಕೊಡವ ಪೆಟ್ಟುಗಳಿಗೆ ನಮ್ಮ ಶತ್ರುಗಳಾಗಿರುತ್ತಾರೆ. ಆದರೆ ಅದರ ಪರಿಣಾಮ ಏನೆಂದು ನಾವು ಇಂದು ತಿಳಿಯುತ್ತಿದ್ದೇವೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ ನನ್ನ ಸ್ವತಃ ಅನುಭವವಿದು. ನನ್ನ ಶಿಕ್ಷಕರು ಮತ್ತು ನಾನು ಇಂದು ಉತ್ತಮ ಸ್ನೇಹಿತರಂತೆ ಇದ್ದೇವೆ. ಅಗತ್ಯ ವಿಷಯಗಳನ್ನು ಚರ್ಚಿಸುತ್ತಾ, ಎಲ್ಲಾದರೂ ಸಿಕ್ಕರೆ ಹ್ಯಾಂಡ್ ಶೇಕ್ ಮಾಡಿ ಮಾತನಾಡುತ್ತ ಉತ್ತಮ ಬಾಂಧವ್ಯದಿಂದ ಇದ್ದೇವೆ. ಕೆಲವೊಮ್ಮೆ ನಾನೆ ಅವರಿಗೆ ಶಿಕ್ಷಕನಾ ಎಂಬ ಪ್ರಶ್ನೆ ಮೂಡುತ್ತವೆ. ಏನೆ ಇರಲಿ ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಶಿಕ್ಷಕರ ಶಕ್ತಿ ಇದೆ ಎನ್ನುವುದು ಒಂದೇ ನನಗೆ ಸಮಾಧಾನ. ಪ್ರತಿಯೊಬ್ಬ ಪ್ರತಿಯೊಂದರಲ್ಲಿ ಇದ್ದರು ಕೂಡ ಅದಕ್ಕೆ ಕಾರಣ ಅವರ ಶಿಕ್ಷಕರು ಹೊರತು ಬೇರೆ ಯಾರು ಅಲ್ಲ. ಇಂದಿನ ಉತ್ತಮ ದಿನದಂದು ನನ್ನ ಎಲ್ಲಾ ಶಿಕ್ಷಕರನ್ನು ಸ್ಮರಿಸುತ್ತ ಸರ್ವ ಶಿಕ್ಷಕರಿಗೂ ಶಿಕ್ಷಕ ದಿನದ ಹಾರ್ದಿಕ ಶುಭಾಶಯಗಳು.
- ಡಿ.ಎಸ್.ಐ.ಬಿ ಪಾಣೆಮಂಗಳೂರು.
0 comments:
Post a Comment