ನವದೆಹಲಿ, ಸೆ. 15, 2020 (ಕರಾವಳಿ ಟೈಮ್ಸ್) : ಸುದರ್ಶನ ವಾಹಿನಿಯ ವಿವಾದಿತ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಎರಡು ಎಪಿಸೋಡ್ ಪ್ರಸರಣಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಮುಸ್ಲಿಂ ಸಮುದಾಯವನ್ನು ‘ಕೆಟ್ಟದಾಗಿ’ ತೋರುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಇಂದು ಮತ್ತು ನಾಳೆ ಪ್ರಸಾರವಾಗಬೇಕಿದ್ದ ಎಪಿಸೋಡ್‍ಗಳಿಗೆ ತಡೆ ನೀಡಿದೆ.
ಈ ಕಾರ್ಯಕ್ರಮವು ಮುಸ್ಲಿಂ ಸಮುದಾಯವನ್ನು ಕೆಣಕಿಸುವಂತೆ ತೋರುತ್ತದೆ ಎಂದಿರುವ ಸುಪ್ರೀಂಕೋರ್ಟ್ ಕಾರ್ಯಕ್ರಮದ ಎರಡು ಸಂಚಿಕೆಗಳ ಪ್ರಸಾರವನ್ನು ತಡೆಹಿಡಿದಿದೆ. ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠವು ಈ ಕಾರ್ಯಕ್ರಮದ ಬಗ್ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತ್ತು. ಸದ್ಯ ಕಾರ್ಯಕ್ರಮಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಮತ್ತು ಕೆ.ಎಂ. ಜೋಸೆಫ್ ಅವರನ್ನೂಳಗೊಂಡ ನ್ಯಾಯಪೀಠ, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಸ್ವಯಂ ನಿಯಂತ್ರಣಕ್ಕೆ ತರುವ ಸಮಿತಿಯನ್ನು ನೇಮಿಸಬಹುದು ಎಂದು ಸೂಚಿಸಿದೆ. ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಕೆಲವು ಮಾನದಂಡಗಳನ್ನು ತರಬಲ್ಲ ಸಮಿತಿಯನ್ನು ನೇಮಿಸಬಹುದು ಎಂಬ ಅಭಿಪ್ರಾಯ ನಮ್ಮದು. ರಾಜಕೀಯವಾಗಿ ವಿಭಜಿಸುವ ಯಾವುದೇ ಸ್ವಭಾವವನ್ನು ನಾವು ಬಯಸುವುದಿಲ್ಲ. ಶ್ಲಾಘನೀಯ ಸ್ಥಾನಮಾನದ ಸದಸ್ಯರು ನಮಗೆ ಬೇಕು ಎಂದು ನ್ಯಾಯಪೀಠ ಹೇಳಿದೆ.
0 comments:
Post a Comment