ಬೆಳಗಾವಿ, ಸೆ. 22, 2020 (ಕರಾವಳಿ ಟೈಮ್ಸ್) : ಕೋವಿಡ್ ವೈರಸ್ ಬಾಧಿಸಿ ನವದೆಹಲಿಯ ಏಮ್ಸ್ ಅಸ್ಪತ್ರೆಯಲ್ಲಿ ಬುಧವಾರ ಸಂಜೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಸಚಿವರ ಪಾರ್ಥಿವ ಶರೀರ ಬೆಳಗಾವಿಗೆ ತರಲು ಕೊರೋನಾ ನಿಯಮಗಳು ಅಡ್ಡಿಯಾಗಿದೆ. ಸೋಂಕಿತರು ಎಲ್ಲಿ ಸಾವನ್ನಪ್ಪುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ನಿಯಮವಿರುವ ಹಿನ್ನಲೆ ಅವರ ಶರೀರವನ್ನು ಹುಟ್ಟೂರಿಗೆ ಸಾಗಿಸಲು ಅಡ್ಡಿಯಾಗಿದೆ.
ರಾಜ್ಯ ಸರಕಾರದಿಂದಲೂ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಕೋವಿಡ್ ನಿಯಮಾವಳಿ ಪ್ರಕಾರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಅವಕಾಶ ಆಗುತ್ತಿಲ್ಲ ಎಂದು ತಿಳಿದುಬಂದಿದೆ.
ಪಾರ್ಥಿವ ಶರೀರವನ್ನು ಕೊಂಡೊಯ್ಯವುದಕ್ಕೆ ಏಮ್ಸ್ ವೈದ್ಯರು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಈ ಕುರಿತು ಪಿಯೂಷ್ ಗೋಯೆಲ್ ಕೂಡ ನಿಬಂಧನೆ ಸಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಂಗಡಿ ಅವರ ಕುಟುಂಬಸ್ಥರು ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಇದು ಫಲಪ್ರದವಾಗದ ಹಿನ್ನಲೆ ಅವರ ಅಂತ್ಯಸಂಸ್ಕಾರ ದೆಹಲಿಯಲ್ಲೇ ನಡೆಯಲಿದೆ. ದೆಹಲಿ ಲೋಧಿ ಎಸ್ಟೇಟ್ನ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಸಂಬಂಧಿಕರಿಗೆ ದೆಹಲಿಗೆ ಬರಲು ಸೂಚಿಸಲಾಗಿದೆ.
0 comments:
Post a Comment