ಉಪತಹಶೀಲ್ದಾರ್ ಶ್ರೀಧರ್ ಅವರಿಗೆ ಬಂಟ್ವಾಳ ತಾಲೂಕು ಕಛೇರಿ ಸಿಬ್ಬಂದಿಗಳಿಂದ ಶ್ರದ್ಧಾಂಜಲಿ - Karavali Times ಉಪತಹಶೀಲ್ದಾರ್ ಶ್ರೀಧರ್ ಅವರಿಗೆ ಬಂಟ್ವಾಳ ತಾಲೂಕು ಕಛೇರಿ ಸಿಬ್ಬಂದಿಗಳಿಂದ ಶ್ರದ್ಧಾಂಜಲಿ - Karavali Times

728x90

8 September 2020

ಉಪತಹಶೀಲ್ದಾರ್ ಶ್ರೀಧರ್ ಅವರಿಗೆ ಬಂಟ್ವಾಳ ತಾಲೂಕು ಕಛೇರಿ ಸಿಬ್ಬಂದಿಗಳಿಂದ ಶ್ರದ್ಧಾಂಜಲಿ




ಬಂಟ್ವಾಳ ಸೆ. 08, 2020 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಭಾನುವಾರ ಅನಾರೋಗ್ಯದಿಂದ ನಿಧನರಾದ ಶ್ರೀಧರ್ ಅವರಿಗೆ ಬಂಟ್ವಾಳ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಕಛೇರಿ ಸಿಬ್ಬಂದಿಗಳು ಮೌನ ಪ್ರಾರ್ಥನೆ ಮತ್ತು ಪುಷ್ಪ ನಮನದೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. 

ಈ ಸಂದರ್ಭ ಮಾತನಾಡಿದ ತಾಲೂಕು ದಂಡಾಧಿಕಾರಿಗಳೂ ಆದ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ಎಲ್ಲರೊಂದಿಗೂ ನಗು ನಗುತ್ತಾ ಬೆರೆಯುತ್ತಿದ್ದ ಉಪತಹಶೀಲ್ದಾರರ ಅನಿರೀಕ್ಷಿತ ಹಾಗೂ ಅಕಾಲಿಕ ಅಗಲಿಕೆ ಎಲ್ಲರಿಗೂ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಬಂಧು-ಬಳಗ ಹಾಗೂ ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಹಾರೈಸಿದರು. 

ಈ ಸಂದರ್ಭ ತಾಲೂಕು ಕಛೇರಿ ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಸಿಬ್ಬಂದಿಗಳು, ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಪಾಣೆಮಂಗಳೂರು ಹೋಬಳಿಯ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. 














  • Blogger Comments
  • Facebook Comments

0 comments:

Post a Comment

Item Reviewed: ಉಪತಹಶೀಲ್ದಾರ್ ಶ್ರೀಧರ್ ಅವರಿಗೆ ಬಂಟ್ವಾಳ ತಾಲೂಕು ಕಛೇರಿ ಸಿಬ್ಬಂದಿಗಳಿಂದ ಶ್ರದ್ಧಾಂಜಲಿ Rating: 5 Reviewed By: karavali Times
Scroll to Top