ಬಂಟ್ವಾಳ, ಸೆ. 13, 2020 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ವತಿಯಿಂದ ದಅವಾ ಕಾನ್ಫೆರೆನ್ಸ್ ಇತ್ತೀಚೆಗೆ ಮಂಚಿ-ಕೆಯ್ಯೂರು ಸುನ್ನೀ ಮಹಲ್ ಸಭಾಂಗಣದಲ್ಲಿ ನಡೆಯಿತು. ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಅಧ್ಯಕ್ಷ ಝುಬೈರ್ ಸಂಪಿಲ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಫ್ ದ.ಕ. ವೆಸ್ಟ್ ಝೋನ್ ಕೋಶಾಧಿಕಾರಿ ಝೈನುಲ್ ಆಬಿದ್ ನಈಮೀ ದುಆ: ನೆರವೇರಿಸಿದರು. ಸುನ್ನೀ ಮಹಲ್ ಮುದರ್ರಿಸ್ ಸಾಲಿಂ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ. ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ವಿಷಯ ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಎಣ್ಮೂರು ಉಸ್ತಾದ್, ಕರೀಂ ಕದ್ಕಾರ್, ಅಸ್ಲಂ ಸಂಪಿಲ, ಹಂಝ ಮಂಚಿ, ರಫೀಕ್ ಝುಹ್ರಿ ಮಂಚಿ, ಇಬ್ರಾಹಿಂ ಸುರಿಬೈಲು ಮೊದಲಾದವರು ಭಾಗವಹಿಸಿದ್ದರು.
ಲಾಕ್ ಡೌನ್ ಸಮಯದಲ್ಲಿ ಸೆಕ್ಟರ್ ಮಟ್ಟದಲ್ಲಿ ಹಮ್ಮಿಕೊಂಡಂತಹ ಆನ್‍ಲೈನ್ ತರ್ತೀಲ್ ಸ್ಪರ್ಧೆಯಲ್ಲಿ ಹಾಗೂ ರಾಜ್ಯ ಮಟ್ಟದ ಆನ್ ಲೈನ್ ಮ್ಯಾಗಝೀನ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಮಂಚಿ ಸೆಕ್ಟರ್ ವ್ಯಾಪ್ತಿಗೊಳಪಟ್ಟ ಅಹ್ಮದ್ ಫಸೀಹ್ ಮಂಚಿ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು. ಸೆಕ್ಟರ್ ದಅವಾ ವಿಂಗ್ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಸೆಕ್ಟರ್ ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು.
0 comments:
Post a Comment