ಮಂಗಳೂರು, ಸೆ. 22, 2020 (ಕರಾವಳಿ ಟೈಮ್ಸ) : ಎಸ್ಕೆಸ್ಸೆಸ್ಸೆಫ್ ಬಜಾಲ್ ಪಡ್ಪು ಕ್ಯಾಂಪಸ್ ವಿಂಗ್ ಸಮಿತಿ ರಚನಾ ಸಭೆ ಸೆ. 20 ರಂದು ಇಲ್ಲಿನ ಎಸ್ಕೆಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಿತು.
ಹನೀಫ್ ದಾರಿಮಿ ದುವಾ ನೆರವೇರಿಸಿದರು. ಬಜಾಲ್ ಪಡ್ಪು ಎಸ್ಕೆಎಸ್ಸೆಸ್ಸೆಫ್ ಶಾಖಾದ್ಯಕ್ಷ ಸದಖತುಲ್ಲಾ ಅಝ್ಹರಿ ಸಭಾಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮಸೀದಿ ಖತೀಬ್ ಮುಹಮ್ಮದ್ ಹನೀಫ್ ದಾರಿಮಿ ಉದ್ಘಾಟಿಸಿದರು.
ಎಸ್ಕೆಸ್ಸೆಸ್ಸೆಫ್ ಮಂಗಳೂರು ವಲಯ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಎ.ಎಚ್. ಕ್ಯಾಂಪಸ್ ವಿಂಗ್ ಎಂದರೇನು ಹಾಗೂ ವಿದ್ಯಾರ್ಥಿಗಳ ಗುಣ, ನಡತೆ, ಸ್ವಭಾವ ಹೇಗಿರಬೇಕು ಎಂಬ ಬಗ್ಗೆ ತರಗತಿ ಮಂಡಿಸಿದರು, ಈ ಸಂದರ್ಭ ಎಸ್ಕೆಸ್ಸೆಸ್ಸೆಫ್ ಬಜಾಲ್ ಪಡ್ಪು ಯೂನಿಟ್ ಹಾಗೂ ಬೋರುಗುಡ್ದೆ ಕ್ಲಸ್ಟರ್ ಪ್ರದಾನ ಕಾರ್ಯದರ್ಶಿ ಮುಸ್ತಫ ಬಜಾಲ್, ಬೋರುಗುಡ್ಡೆ ವಿಖಾಯ ಕಾರ್ಯದರ್ಶಿ ಸಿರಾಜ್ ಕಣ್ಣೂರ್, ಬಜಾಲ್ ಪಡ್ಪು ಯೂನಿಟ್ ಕೋಶಾಧಿಕಾರಿ ಉನೈಸ್ ಬಜಾಲ್, ಮುಖ್ತಾರ್ ಬಜಾಲ್ ಉಪಸ್ತಿತರಿದ್ದರು.
ಇದೇ ವೇಳೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ಬೋರುಗುಡ್ಡೆ ಕ್ಲಸ್ಟರ್ ಹಾಗೂ ಬಜಾಲ್ ಪಡ್ಪು ಯೂನಿಟ್ ಹಾಗೂ ಎಂ.ಜೆ.ಎಂ. ಬಜಾಲ್ ಪಡ್ಪು ಮಸೀದಿಯ ಸಹಕಾರದೊಂದಿಗೆ ಸೆ. 27 ರಂದು ನಡೆಯಲಿರುವ ಸಾರ್ವಜನಿಕ ರಕ್ತದಾನ ಶಿಬಿರದ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು. ನಾಝಿಕ್ ಬಜಾಲ್ ಸ್ವಾಗತಿಸಿದರು.
0 comments:
Post a Comment