ಎಸ್.ಬಿ.ಐ ಗ್ರಾಹಕರು ಇನ್ನು ಮುಂದೆ ಹಣ ವಿತ್ ಡ್ರಾಗೆ ಮೊಬೈಲ್ ಒಟಿಪಿ ಪಡೆಯಲಿದ್ದಾರೆ - Karavali Times ಎಸ್.ಬಿ.ಐ ಗ್ರಾಹಕರು ಇನ್ನು ಮುಂದೆ ಹಣ ವಿತ್ ಡ್ರಾಗೆ ಮೊಬೈಲ್ ಒಟಿಪಿ ಪಡೆಯಲಿದ್ದಾರೆ - Karavali Times

728x90

15 September 2020

ಎಸ್.ಬಿ.ಐ ಗ್ರಾಹಕರು ಇನ್ನು ಮುಂದೆ ಹಣ ವಿತ್ ಡ್ರಾಗೆ ಮೊಬೈಲ್ ಒಟಿಪಿ ಪಡೆಯಲಿದ್ದಾರೆ

 


ಬ್ಯಾಂಕ್ ಗ್ರಾಹಕರ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಸೆ. 18 ರಿಂದ ವಿತ್ ಡ್ರಾ ಹೊಸ ನಿಯಮ ಜಾರಿ 


ನವದೆಹಲಿ, ಸೆ. 16 (ಕರಾವಳಿ ಟೈಮ್ಸ್) : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ದೇಶದ ತನ್ನ ಎಲ್ಲಾ ಎಟಿಎಂಗಳಲ್ಲಿ ಒಟಿಪಿ ಆಧಾರಿತ ನಗದು ಹಿಂಪಡೆಯುವಿಕೆ ಹೊಸ ಪದ್ದತಿಯನ್ನು ಸೆ. 18ರಿಂದ ಜಾರಿಗೆ ತರುತ್ತಿದ್ದು, ಆ ಮೂಲಕ ಗ್ರಾಹಕರಿಗೆ ಭದ್ರತೆ ಹಾಗೂ ಸುರಕ್ಷತೆ ಹೆಚ್ಚಿಸಲಿದೆ. 

10 ಸಾವಿರ ರೂಪಾಯಿ ಹಾಗೂ ಅದಕ್ಕಿಂತ ಮೇಲ್ಪಟ್ಟು ಮೊತ್ತವನ್ನು ಎಸ್.ಬಿ.ಐ. ಡೆಬಿಟ್ ಕಾರ್ಡ್ ಹೊಂದಿರುವವರು ಹಣ ಹಿಂಪಡೆಯಲು ಡೆಬಿಟ್ ಕಾರ್ಡ್ ಪಿನ್ ನೊಂದಿಗೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ಕೂಡಾ ಇನ್ನು ಮುಂದೆ ಪ್ರತಿ ಬಾರಿ ನಮೂದಿಸಬೇಕಾಗುತ್ತದೆ. 

ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ, ಎಸ್ಬಿಐ ಎಟಿಎಂ ನಗದು ಹಿಂಪಡೆಯುವಿಕೆಯಲ್ಲಿ ಭದ್ರತೆ ಹಾಗೂ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಿದೆ. ದಿನವಿಡೀ ಈ ಸೌಲಭ್ಯವನ್ನು ಜಾರಿಗೊಳಿಸುವುದರಿಂದ ಎಸ್.ಬಿ.ಐ ಡೆಬಿಟ್ ಕಾರ್ಡ್‍ದಾರರು ವಂಚಕರಿಗೆ ಬಲಿಯಾಗುವ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಈ ನೂತನ ಪದ್ದತಿ ಜಾರಿಗೆ ತರಲಾಗುತ್ತಿದೆ ಎಂದು ಎಸ್.ಬಿ.ಐ. ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಹಣಕಾಸು ಸ್ವಿಚ್ (ಎನ್‍ಎಫ್‍ಎಸ್) ಎಸ್.ಬಿ.ಐ. ಅಲ್ಲದ ಎಟಿಎಂಗಳಲ್ಲಿ ಈ ಕಾರ್ಯವನ್ನು ಅಭಿವೃದ್ಧಿಪಡಿಸಿಲ್ಲ. ಹಾಗಾಗಿ ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವು ಎಸ್.ಬಿ.ಐ. ಎಟಿಎಂಗಳಲ್ಲಿ ಮಾತ್ರ ಲಭ್ಯವಿರಲಿದೆ.









  • Blogger Comments
  • Facebook Comments

0 comments:

Post a Comment

Item Reviewed: ಎಸ್.ಬಿ.ಐ ಗ್ರಾಹಕರು ಇನ್ನು ಮುಂದೆ ಹಣ ವಿತ್ ಡ್ರಾಗೆ ಮೊಬೈಲ್ ಒಟಿಪಿ ಪಡೆಯಲಿದ್ದಾರೆ Rating: 5 Reviewed By: karavali Times
Scroll to Top