ಮುಂದಿನ 3 ದಿನ ರಾಜ್ಯದ ವಿವಿಧೆಡೆ ಭಾರೀ ಮಳೆ ನಿರೀಕ್ಷೆ : ಹವಾಮಾನ‌ ಇಲಾಖೆ ಎಚ್ಚರಿಕೆ - Karavali Times ಮುಂದಿನ 3 ದಿನ ರಾಜ್ಯದ ವಿವಿಧೆಡೆ ಭಾರೀ ಮಳೆ ನಿರೀಕ್ಷೆ : ಹವಾಮಾನ‌ ಇಲಾಖೆ ಎಚ್ಚರಿಕೆ - Karavali Times

728x90

1 September 2020

ಮುಂದಿನ 3 ದಿನ ರಾಜ್ಯದ ವಿವಿಧೆಡೆ ಭಾರೀ ಮಳೆ ನಿರೀಕ್ಷೆ : ಹವಾಮಾನ‌ ಇಲಾಖೆ ಎಚ್ಚರಿಕೆ

 


ಕರಾವಳಿ ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್ ಘೋಷಣೆ

ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಪರಿಣಾಮ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್ ಘೋಷಿಸಲಾಗಿದೆ.

ಕಳೆದ 20 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ದೂರವಾಗಿದ್ದ ಮಳೆ ಮಂಗಳವಾರದಿಂದ ಮತ್ತೆ ಬಿರುಸುಗೊಂಡಿದೆ. ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ಮಳೆ ಮಲೆನಾಡು ಜನರಲ್ಲಿ ಆತಂಕ ಹುಟ್ಟಿಸಿತ್ತು. ಒಂದೇ ವಾರದ ಮಳೆ ಮಲೆನಾಡಲ್ಲಿ ಸಾಕಷ್ಟು ಅನಾಹುತಗಳನ್ನೂ ಸೃಷ್ಟಿಸಿ ಹಾಕಿತ್ತು. ಇದೀಗ ಮತ್ತೆ ಮಳೆ ಬಿರುಸುಗೊಂಡಿದ್ದು ಸಹಜವಾಗಿಯೇ ಜನರನ್ನು ಆತಂಕಕ್ಕೀಡು ಮಾಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಬಾರೀ ಮಳೆ ಕಡಿಮೆಯಾಗಿದೆ. ಬರೊಬ್ಬರಿ 14 ವರ್ಷಗಳ ಬಳಿಕ ಮೊದಲ ಬಾರಿಗೆ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಕನಿಷ್ಠ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಆದರೆ ದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆಯಾಗಿದೆ. ಕಳೆದ 120 ವರ್ಷಗಳ ಅವಧಿಯಲ್ಲಿ ಸುರಿದ ಮಳೆ ಗರಿಷ್ಠ ಪ್ರಮಾಣದ ಮಳೆ ಸುರಿದಿದ್ದು, ಶೇ.27 ರಷ್ಟು ಅಧಿಕ ಪ್ರಮಾಣದ ಮಳೆ ಬಿದ್ದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಮೂರು ದಿನಗಳ ಕಾಲ ಉತ್ತರ ಭಾರತ, ಈಶಾನ್ಯ ರಾಜ್ಯಗಳು ಹಾಗೂ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾವ ಸಾಧ್ಯತೆ ಇದೆ.








  • Blogger Comments
  • Facebook Comments

0 comments:

Post a Comment

Item Reviewed: ಮುಂದಿನ 3 ದಿನ ರಾಜ್ಯದ ವಿವಿಧೆಡೆ ಭಾರೀ ಮಳೆ ನಿರೀಕ್ಷೆ : ಹವಾಮಾನ‌ ಇಲಾಖೆ ಎಚ್ಚರಿಕೆ Rating: 5 Reviewed By: karavali Times
Scroll to Top