ಚೆನ್ನೈ ಸೆ. 08, 2020 (ಕರಾವಳಿ ಟೈಮ್ಸ್) : ಭಾರತ ಸರಕಾರ ಇತ್ತೀಚೆಗೆ ನಿಷೇಧ ಹೇರಿದ ಆಡದಂತೆ ತಂದೆ ತಾಕೀತು ಮಾಡಿದ ಹಿನ್ನಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿ ಶ್ರೀನಿವಾಸ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ವನಿಯಂಬಾಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಹೇರಲಾದ ಬಳಿಕ ವಿದ್ಯಾರ್ಥಿ ಮನೆಯಲ್ಲೇ ಇದ್ದು, ನಿರಂತರ ಪಬ್ ಜಿ ಆಟದಲ್ಲೇ ನಿರತನಾಗುತ್ತಿದ್ದ. ಹೀಗಾಗಿ ಈತ ಮೊಬೈಲ್ ಆಟದಲ್ಲೇ ಮುಳುಗಿ ಹೋಗಿದ್ದ ಎನ್ನಲಾಗಿದೆ. ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಯ ತಂದೆ ಪೆರುಮಲ್ ಅವರು ನಿಷೇಧಿತ ಗೇಮ್ ಆಡಂತೆ ಮಗನಿಗೆ ಬುದ್ದಿ ಮಾತು ಮೂಲಕ ತಾಕೀತು ಮಾಡಿದ್ದಾರೆ. ಇದೇ ಕಾರಣಕ್ಕೆ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪಬ್ ಜಿ ಆಡುತ್ತಲೇ ಹೆಚ್ಚು ಕಾಲ ಕಳೆಯುತ್ತಿದ್ದ ಮಗನಿಗೆ ಪೆರುಮಲ್ ಬುದ್ಧಿ ಮಾತು ಹೇಳಿ, ಗೇಮ್ ಆಡಬೇಡ ಎಂದಿದ್ದರು. ಅಲ್ಲದೆ ಅವನ ಕೈಯ್ಯಲ್ಲಿದ್ದ ಮೊಬೈಲ್ ಪೊನ್ ಕೂಡಾ ವಶಪಡಿಸಿಕೊಂಡಿದ್ದರು. ಇದರಿಂದ ಖಿನ್ನತೆಗೊಳಗಾದ ವಿದ್ಯಾರ್ಥಿ ಶ್ರೀನಿವಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
0 comments:
Post a Comment