ಬೆಂಗಳೂರು, ಸೆ. 24, 2020 (ಕರಾವಳಿ ಟೈಮ್ಸ್) : ಯುಜಿಸಿಇಟಿ-2020ರಲ್ಲಿ ರ್ಯಾಂಕ್ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಸೆ. 7 ರಿಂದ 23ರವರೆಗೆ ನಿಗದಿತ ದಿನಾಂಕಗಳಲ್ಲಿ ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡದೆ ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಮೇಲಿನ ದಿನಾಂಕಗಳಲ್ಲಿ ಮೂಲ ದಾಖಳೆಗಳನ್ನು ಅಪ್‍ಲೋಡ್ ಮಾಡದೆ ಇರುವ ವಿದ್ಯಾರ್ಥಿಗಳು ಸೆ. 24 ರಿಂದ 27ರವರೆಗೆ ಮೂಲ ದಾಖಲೆಗಳನ್ನು ವೆಬ್‍ಸೈಟ್ ನಿಗದಿತ ಲಿಂಕ್ ಆಯ್ಕೆ ಮಾಡಿ ಅಪ್‍ಲೋಡ್ ಮಾಡಬಹುದು.
ಈಗಾಗಲೇ ದಾಖಲೆ ಅಪ್‍ಲೋಡ್ ಮಾಡಿ ಡಿಕ್ಲರೇಶನ್ ಮಾಡದೆ ಇರುವ ವಿದ್ಯಾರ್ಥಿಗಳೂ ಕೂಡಾ ಇದೇ ದಿನಾಂಕಗಳಲ್ಲಿ ಡಿಕ್ಲರೇಶನ್ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ದ್ವಿತೀಯ ಪಿಯುಸಿ ಅಂಕಪಟ್ಟಿ ಸಲ್ಲಿಸದೆ ಅಥವಾ ಅರ್ಹತಾ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಅಂಕಗಳು ಪರಿಷ್ಕøತವಾದ ಹಿನ್ನಲೆಯಲ್ಲಿ ಸ್ಪಾಟ್ ರ್ಯಾಂಕ್ ಗಳಿಸಿದ ಅಭ್ಯರ್ಥಿಗಳೂ ಕೂಡಾ ಇದೇ ದಿನಾಂಕಗಳಂದು ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೂಲ ದಾಖಲಾತಿ ಅಪ್‍ಲೋಡ್ ಮಾಡಲು ಇದು ಅಂತಿಮ ಅವಕಾಶವಾಗಿರುತ್ತದೆ. ಉಳಿದಂತೆ ಸೆ. 24 ರಿಂದ ಅ. 1 ರವರೆಗೆ ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಪ್ರಕಟಣೆ ತಿಳಿಸಿದೆ.
ಡಿಪ್ಲೋಮಾ ಸಿಇಟಿ ಹಾಗೂ ಪಿಜಿಸಿಇಟಿ ಆನ್‍ಲೈನ್ ಅರ್ಜಿ ತಿದ್ದುಪಡಿಗೆ ಅವಕಾಶ
2020ನೇ ಸಾಲಿನ ಡಿಸಿಇಟಿ ಸಂಬಂಧಿಸಿದ ಈಗಾಗಲೇ ಸಲ್ಲಿಸಿರುವ ಆನ್‍ಲೈನ್ ಅರ್ಜಿಗಳಲ್ಲಿ ಅರ್ಹತೆಗೆ ಅನುಗುಣವಾಗಿ ಮಾರ್ಪಾಟು ಮಾಡಲು ಸೆ. 24 ರ ಬೆಳಿಗ್ಗೆ 11 ರಿಂದ ಸೆ. 25 ರ ಸಂಜೆ 6 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಪಿಜಿಸಿಇಟಿ ಆನ್‍ಲೈನ್ ಅರ್ಜಿ ತಿದ್ದುಪಡಿಗೂ ಇದೇ ದಿನಾಂಕಗಳವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
0 comments:
Post a Comment