ಬಂಟ್ವಾಳ, ಸೆ. 16, 2020 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಬುಧವಾರ ನೆರೆವೇರಿಸಿದರು.
ಕಿಲ್ತೋಡಿ ಮಲೆಬಾವು ರಸ್ತೆಗೆ 5ಲಕ್ಷ, ಮೈಂದಾಲ ಕೋಟಿಪಾಲು ರಸ್ತೆಗೆ 5 ಲಕ್ಷ, ಅಜ್ಜಂಕೋಡಿ ಪರ್ಲ ರಸ್ತೆಗೆ 10 ಲಕ್ಷ, ಪೊೈಲೋಡಿ ಮಲೆಬಾವು ರಸ್ತೆಗೆ 25 ಲಕ್ಷ, ಬೋವಿನಪಾಡಿ ಕ್ವಾರ್ಟಸ್ ರಸ್ತೆಗೆ 10 ಲಕ್ಷ, ದೇವಸ್ಯಪಡೂರು ಗ್ರಾಮದ ಕೇದಿಗೆ ನೂಜೆ ರಸ್ತೆಗೆ 10 ಲಕ್ಷ ಕಾಮಾಗಾರಿಗಳಿಗೆ ಶಿಲಾನ್ಯಾಸ ಹಾಗೂ ಪೂರ್ಣಗೊಂಡ ಕಾಮಗಾರಿಗಳನ್ನು ಇದೇ ವೇಳೆ ಶಾಸಕರು ಉದ್ಘಾಟಿಸಿದರು.
ಈ ಸಂದರ್ಭ ಸದಾನಂದ ಹಳೆಗೇಟು, ಶಾಂತವೀರ ಪೂಜಾರಿ, ಜನಾರ್ದನ ಕೊಂಬೆಟ್ಟು, ಸುದರ್ಶನ್ ಬಜ, ಸೀತರಾಮ ಗೌಡ, ವಿಜಯ ಕುಮಾರ್, ಯೋಗಿಶ್ ಪಟ್ಲ, ವಿಲಾಸಿನಿ, ಶೀಲ, ಸುರೇಖ, ಜಯಂತಿ, ರಾಜೀವಿ, ಜೆಸಿಂತಾ ವಾಸ್, ಶೇಖರ ಪೂಜಾರಿ, ಪದ್ಮನಾಭ ಕೆಂಪುಗುಡ್ಡೆ, ಜಯರಾಮ ಗೌಡ, ಸಂಪತ್ ಕುಮಾರ್, ಪ್ರವೀಣ್ ಕುಮಾರ್, ಮನ್ಮಥ್ ರಾಜ್ ಜೈನ್, ಆದಿರಾಜ್ ಜೈನ್, ಶಾಂತಿ ಪ್ರಸಾದ್, ವಿಠಲ ಕೊಟ್ಯಾನ್, ಜಿನೇಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment