ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳ ಅನುಷ್ಠಾನದತ್ತ ಹೆಚ್ಚಿನ ಗಮನ : ಸಚಿವ ಶೆಟ್ಟರ್ - Karavali Times ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳ ಅನುಷ್ಠಾನದತ್ತ ಹೆಚ್ಚಿನ ಗಮನ : ಸಚಿವ ಶೆಟ್ಟರ್ - Karavali Times

728x90

12 September 2020

ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳ ಅನುಷ್ಠಾನದತ್ತ ಹೆಚ್ಚಿನ ಗಮನ : ಸಚಿವ ಶೆಟ್ಟರ್








ಬಿಲ್ಡಿಂಗ್ ದ ಫ್ಯೂಚರ್-ಇಂಟರ್ ಆಕ್ಟಿವ್ ಸೆಶನ್ ಆನ್ ಎನ್‍ಕರೇಜಿಂಗ್ ಡೊಮೆಸ್ಟಿಕ್ ಸ್ಕೇಲ್ ಅಪ್ ಆಫ್ ಇಂಡಿಯನ್ ಕನ್ಸ್ಟ್ರಕ್ಷನ್ ಇಕ್ಯೂಫ್‍ಮೆಂಟ್ ಎಕೋಸಿಸ್ಟಮ್ ವೆಬಿನಾರ್ 


ಬೆಂಗಳೂರು, ಸೆ. 12, 2020 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳ ಅನುಷ್ಠಾನಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಅಲ್ಲದೆ, ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯದಲ್ಲಿ ಕ್ರಾಂತಿಕಾರಿ ನೀತಿಗಳನ್ನು ಜಾರಿಗೊಳಿಸಲಾಗಿದ್ದು, ಒಟ್ಟಾರೆಯಾಗಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. 

ಬೆಂಗಳೂರಿನಲ್ಲಿ ಕೈಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಬಿಲ್ಡಿಂಗ್ ದ ಫ್ಯೂಚರ್-ಇಂಟರ್ ಆಕ್ಟಿವ್ ಸೆಸ್‍ನ್ ಆನ್ ಎನ್‍ಕರೇಜಿಂಗ್ ಡೊಮೆಸ್ಟಿಕ್ ಸ್ಕೇಲ್ ಅಪ್ ಆಫ್ ಇಂಡಿಯನ್ ಕನ್ಸ್ಟ್ರಕ್ಷನ್ ಇಕ್ಯೂಪ್‍ಮೆಂಟ್ ಎಕೋಸಿಸ್ಟಮ್ ವೆಬಿನಾರ್‍ನಲ್ಲಿ ಭಾಗವಹಿಸಿ ಕೈಗಾರಿಕೆ ಮತ್ತು ಆರ್ಥಿಕಾಭಿವೃದ್ದಿಯತ್ತ ಕರ್ನಾಟಕ ರಾಜ್ಯದ ದೃಷ್ಟಿಯ ಬಗ್ಗೆ ಮಾಹಿತಿಯನ್ನು ನೀಡಿದರು. 

ಕರ್ನಾಟಕ ರಾಜ್ಯವನ್ನು ಹೂಡಿಕೆ ಸ್ನೇಹೀ ರಾಜ್ಯವನ್ನಾಗಿಸುವತ್ತ ಸರಕಾರ ಕ್ರಾಂತಿಕಾರಿ ಕ್ರಮಗಳನ್ನ ಕೈಗೊಂಡಿದೆ. ಇದರಿಂದಾಗಿ ಕರ್ನಾಟಕ ರಾಜ್ಯದ ಜಿಎಸ್‍ಡಿಪಿ 201 ಬಿಲಿಯನ್‍ನಷ್ಟಿದೆ. ಅಲ್ಲದೆ, ರಾಜ್ಯ ರಫ್ತಿನ ಪ್ರಮಾಣ 100 ಬಿಲಿಯನ್‍ನಷ್ಟಿದ್ದು ದೇಶದಲ್ಲಿ ನಂ 1 ಸ್ಥಾನವನ್ನು ಹೊಂದಿದ್ದೇವೆ. ನೀತಿ ಆಯೋಗದ ಇಂಡಿಯಾ ಇನ್ನೋವೇಷನ್ ಇಂಡೆಕ್ಸ್‍ನಲ್ಲಿ ನಂ 1 ಸ್ಥಾನಲ್ಲಿದ್ದು ದೇಶದಲ್ಲೇ ಹೆಚ್ಚಿನ ಪ್ರಮಾಣದ ಆರ್ ಆಂಡ್ ಡಿ ಕೇಂದ್ರಗಳನ್ನು ಹೊಂದಿದ್ದೇವೆ. ಚೆನ್ನೈ ಹಾಗೂ ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಹಾಗೂ ಬೆಂಗಳೂರು ಮುಂಬಯಿ ಎಕನಾಮಿಕ್ ಕಾರಿಡಾರ್ ಹೀಗೆ ಎರಡು ಇಂಡಸ್ಟ್ರೀಯಲ್ ಕಾರಿಡಾರ್ ಹೊಂದಿರುವ ಎಕೈಕ ರಾಜ್ಯವಾಗಿದೆ ಎಂದು ಹೇಳಿದರು. 

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾಗಿರುವ ವಿದ್ಯುತ್ ಶಕ್ತಿ, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳು ಲಭ್ಯವಿವೆ. ಅಲ್ಲದೆ, ರಾಜ್ಯದಲ್ಲಿ 16-35 ವರ್ಷದ ಒಳಗಿನ 20 ಮಿಲಿಯನ್ ಯುವಜನರಿದ್ದಾರೆ. ಅವರಿಗೆ ಅಗತ್ಯವಿರುವ ಕೌಶಲ್ಯಾಭಿವೃದ್ದಿಯನ್ನು ನೀಡುವಲ್ಲಿ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. 

ಕಳೆದ ಕೆಲವು ತಿಂಗಳಿನಲ್ಲಿ ಕಾರ್ಮಿಕ ಕಾನೂನು, ಭೂಸುಧಾರಣಾ ನೀತಿ ಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದಿದ್ದೇವೆ. ಅಲ್ಲದೆ, ಹೊಸದಾಗಿ ಘೋಷಣೆ ಮಾಡಿರುವ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯಗಳ ಅಧಿನಿಯಮದಿಂದಾಗಿ ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿದ್ದ ಹಲವಾರು ಅಡೆತಡೆಗಳನ್ನು ನಿವಾರಿಸಲಾಗಿದೆ. ಡಿಐಪಿಟಿ ನಿರ್ದೇಶನದಂತೆ ಇಲಾಖೆಯಲ್ಲಿ ಈಗಾಗಲೇ ಬ್ಯುಸಿನೆಸ್ ರಿಫಾರ್ಮ್ಸ್ ಆಕ್ಷನ್ ಪಾಯಿಂಟ್ಸ್‍ಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳತ್ತ ಹೆಚ್ಚಿನ ಗಮನ ನೀಡಲಾಗಿದೆ. ಇವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇದೇ ಸಂಧರ್ಭದಲ್ಲಿ ಭರವಸೆ ನೀಡಿದರು. 

ವೆಬಿನಾರ್‍ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಇನ್‍ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಓ ದೀಪಕ್ ಬಾಗ್ಲಾ, ಐಸಿಇಎಂಎ ಅಧ್ಯಕ್ಷರಾದ ಸಂದೀಪ್ ಸಿಂಗ್ ಮೊದಲಾದವರು ಪಾಲ್ಗೊಂಡಿದ್ದರು. 











  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳ ಅನುಷ್ಠಾನದತ್ತ ಹೆಚ್ಚಿನ ಗಮನ : ಸಚಿವ ಶೆಟ್ಟರ್ Rating: 5 Reviewed By: karavali Times
Scroll to Top