ಶಿವಮೊಗ್ಗ (ಕರಾವಳಿ ಟೈಮ್ಸ್) : ಗೇಮಿಂಗ್ ಮತ್ತು ಅನಿಮೇಶನ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಗೆ ಕರ್ನಾಟಕದಲ್ಲಿ ವಿಪುಲ ಅವಕಾಶವಿದೆ. ಇದಕ್ಕೆ ಪೂರಕವಾದ ಅಗತ್ಯ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸಿಐಐ ಏರ್ಪಡಿಸಿದ್ದ ಜಾಗತಿಕ ಅನಿಮೇಷನ್, ವಿಎಫ್‍ಎಕ್ಸ್, ಗೇಮಿಂಗ್ ಆಂಡ್ ಕಾಮಿಕ್ಸ್ ಕುರಿತಾದ ವೆಬಿನಾರ್‍ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರ್ನಾಟಕದಲ್ಲಿ ಎವಿಜಿಸಿ ಕ್ಷೇತ್ರದ ಅವಕಾಶಗಳ ಅನ್ವೇಷಣೆ ಕುರಿತಾಗಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅನಿಮೇಷನ್ ಉದ್ಯಮ ಸ್ಥಿರವಾದ ಬೆಳವಣಿಗೆಯನ್ನು ಕಾಣುತ್ತಿದೆ ಮತ್ತು ಅತ್ಯಂತ ಹೆಚ್ಚು ಅವಕಾಶ ಹೊಂದಿರುವ ಕ್ಷೇತ್ರವಾಗಿದೆ. ಇದರ ಪರಿಣಾಮ ಭಾರತಕ್ಕೆ ಅನಿಮೇಷನ್ ತಂತ್ರಜ್ಞಾನದ ಅರಿವು ನಿರಂತರವಾಗಿ ಸಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕವು ಹೈಟೆಕ್ ಉದ್ಯಮ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ಇದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಂತರಿಕ್ಷ ಮತ್ತು ಇತರೆ ತಂತ್ರಜ್ಞಾನ ಆಧಾರಿತ ಕ್ಷೇತ್ರಗಳ ಮೂಲಕ ದೇಶದ ಆದಾಯಕ್ಕೆ ಗಣನೀಯ ಪ್ರಮಾಣದ ಕೊಡುಗೆಯನ್ನು ನೀಡುತ್ತಿದೆ ಎಂದ ಅವರು ಅನಿಮೇಷನ್ ಮತ್ತು ಗೇಮಿಂಗ್ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರ ಎಂಬುದನ್ನು ಪರಿಗಣಿಸಿದ ಮೊದಲ ರಾಜ್ಯವೆಂದರೆ ಕರ್ನಾಟಕ. ಅಲ್ಲದೇ, ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರತ್ಯೇಕ ನೀತಿಯನ್ನೂ ಜಾರಿಗೆ ತಂದಿರುವ ಮೊದಲ ರಾಜ್ಯವೂ ಕರ್ನಾಟಕವಾಗಿದೆ ಎಂದರು.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಅ£ಮೇಷನ್ ಸೇವೆಗಳು, ವಿಎಫ್‍ಎಕ್ಸ್ ಸೇವೆಗಳು ಮತ್ತು ಗೇಮಿಂಗ್ ಡೆವಲಪರ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಈ ಸಂಖ್ಯೆ ಅಧಿಕವಾಗಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರಕಾರ ಅನಿಮೇಷನ್ ಮತ್ತು ಗೇಮಿಂಗ್ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಪ್ರಕಟಿಸಿರುವುದಾಗಿದೆ ಎಂದರು.
ಪ್ರಸ್ತುತ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್ ಮತ್ತು ಗೇಮಿಂಗ್ ಕ್ಷೇತ್ರದ ಟಾಪ್ ತಾಣಗಳಲ್ಲಿ ಕರ್ನಾಟಕ ಒಂದಾಗಿದೆ. ಟೆಕ್ನಿಕಲರ್ ಇಂಡಿಯಾ, ಝಿಂಗಾ ಇಂಡಿಯಾ, ಡ್ರೀಂ ವರ್ಕ್ಸ್ ಸ್ಟುಡಿಯೋಸ್, ಪ್ರೈಂ ಫೆÇೀಕಸ್, ಇಎ ಮತ್ತು ಟಾಟಾ ಎಲೆಕ್ಸಿಯಂತಹ ಜಾಗತಿಕ ಸ್ಟುಡಿಯೋಗಳ ಕಾರ್ಯಾಚರಣೆಯ ನೆಚ್ಚಿನ ತಾಣವಾಗಿದೆ ಎಂದು ಶೆಟ್ಟರ್ ತಿಳಿಸಿದರು.
ದೇಶದಲ್ಲಿರುವ 425 ಸ್ಟುಡಿಯೋಗಳ (300 ಅನಿಮೇಷನ್, 40 ವಿಎಫ್‍ಎಕ್ಸ್ ಮತ್ತು 85 ಗೇಮ್ ಡೆವಲಪ್‍ಮೆಂಟ್) ಪೈಕಿ ಬೆಂಗಳೂರಿನಲ್ಲಿ ಶೇ. 11 ರಷ್ಟಿವೆ. ಉದ್ಯಮದ ಅಂದಾಜಿನ ಪ್ರಕಾರ, ಎವಿಜಿಸಿ ಸಂಬಂಧಿತ ತರಬೇತಿಗಳನ್ನು ಕರ್ನಾಟಕದ 80 ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. ಇಲ್ಲಿ ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೇ, 5 ಸಾವಿರಕ್ಕೂ ಅಧಿಕ ವೃತ್ತಿಪರರು ಶಿಕ್ಷಣ ಮತ್ತು ಅನಿಮೇಷನ್ ನಿರ್ಮಾಣ ಘಟಕಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ ಎಂದು ಸಚಿವರು ವಿವರಿಸಿದರು.
ಈ ಸಂಧರ್ಭದಲ್ಲಿ ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment