ಮಂಡ್ಯ, ಸೆ. 11, 2020 (ಕರಾವಳಿ ಟೈಮ್ಸ್): ಮಂಡ್ಯ ಜಿಲ್ಲೆಯ ಶ್ರೀ ಅರ್ಕೇಶ್ವರ ದೇವಾಲಯದ ಪ್ರಾಂಗಣದಲ್ಲಿ ಮಲಗಿದ್ದ ಮೂವರು ಅರ್ಚಕರನ್ನು ಹತ್ಯೆ ಮಾಡಿದ ದರೋಡೆಕೋರರು ದೇವಸ್ಥಾನದ ಹುಂಡಿ ಹಣವನ್ನು ದೋಚಿ ಪರಾರಿಯಾದ ಘಟನೆ ನಡೆದಿದ್ದು, ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ.
ಹತ್ಯೆಗೊಳಗಾದ ಅರ್ಚಕರನ್ನು ಮಂಡ್ಯದ ಗುತ್ತಲು ಎಂಬಲ್ಲಿನ ನಿವಾಸಿಗಳಾದ ಗಣೇಶ್ (35), ಪ್ರಕಾಶ್ (36) ಮತ್ತು ಆನಂದ್ (33) ಎಂದು ಹೆಸರಿಸಲಾಗಿದೆ. ಈ ಮೂವರು ಕೂಡಾ ದೇವಾಲಯದ ಅರ್ಚಕರು ಹಾಗೂ ಕಾವಲುಗಾರರಾಗಿ ಪಾಳಿ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೇವರ ಪೂಜೆಯ ಉಸ್ತುವಾರಿ ಜೊತೆಗೆ ದೇವಾಲಯದ ಕಾವಲು ಕಾಯುವ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಅರಕೇಶ್ವರ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಆರೋಪಿಗಳ ಪತ್ತೆಗೆ ಪೆÇಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.
ಈ ಮೂವರು ಗುರುವಾರ ರಾತ್ರಿ ಗೋಪುರ ಮುಖ್ಯ ದ್ವಾರದ ಬಾಗಿಲಿನ ಚಿಲಕವನ್ನು ಒಳಗಿನಿಂದ ಭದ್ರಪಡಿಸಿಕೊಂಡು ಮಲಗಿದ್ದರು. ಉತ್ತರ ದಿಕ್ಕಿನ ಕಾಂಪೌಂಡ್ ಪಕ್ಕದಲ್ಲಿರುವ ಮರವನ್ನೇರಿ ದೇವಾಲಯದ ಒಳಗೆ ಪ್ರವೇಶಿಸಿದ ದರೋಡೆಕೋರರು ಮೂವರನ್ನು ಹತ್ಯೆ ಮಾಡಿ ನಂತರ ಹುಂಡಿ ಹೊಡೆದಿದ್ದಾರೆ. ಅದರಲ್ಲಿದ್ದ ಹಣವನ್ನು ದೋಚಿದ್ದು, ಹುಂಡಿಯನ್ನು ಕಲ್ಯಾಣಿ ಸಮೀಪದ ಸ್ನಾನದ ಮನೆ ಬಳಿ ಬಿಸಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮಂಡ್ಯ ಪೂರ್ವ ಪೆÇೀಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿಯಿಂದ ತಲಾ 5 ಲಕ್ಷ ಪರಿಹಾರ ಘೋಷಣೆ
ಮಂಡ್ಯ ಅರ್ಕೇಶ್ವರ ದೇವಾಲಯದ ಮೂವರು ಅರ್ಚಕರು ಹತ್ಯೆಯಾಗಿದ್ದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
0 comments:
Post a Comment