ಮಂಗಳೂರು ಸೆ. 08, 2020 (ಕರಾವಳಿ ಟೈಮ್ಸ್) : ಬೋಳಿಯಾರು ಗ್ರಾಮದ ಕುಕ್ಕೋಟು 1ನೇ ಹಾಗೂ 2ನೇ ಅಡ್ಡ ರಸ್ತೆ ಕಾಮಗಾರಿಗೆ ಮಂಗಳೂರು ಶಾಸಕ ಯು.ಟಿ. ಖಾದರ್ ಶಿಲಾನ್ಯಾಸ ನೆರವೇರಿಸಿದರು.
ಶಾಸಕರ ಮತ್ತು ಮಂಗಳೂರು ತಾ.ಪಂ ಅನುದಾನದಿಂದ ಈ ಎರಡು ರಸ್ತೆಗಳ ಕಾಂಕ್ರಿಟೀಕರಣ ಕಾಮಗಾರಿ ನಡೆಯಲಿದೆ. ಈ ಸಂದರ್ಭ ತಾ.ಪಂ. ಸದಸ್ಯ ಬಿ.ಕೆ. ಅಬ್ದುಲ್ ಜಬ್ಬಾರ್, ಬೋಳಿಯಾರು ಗ್ರಾ.ಪಂ. ಮಾಜಿ ಸದಸ್ಯರಾದ ರಮೇಶ್ ಶೆಟ್ಟಿ, ಜಾನ್ ಪೌಲ್, ಜೆಸಿಂತ ಪಿಂಟೋ, ಅಬ್ದುಲ್ ಶಕೂರ್, ಗೌಸಿಯ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್, ರಿಫಾಯ ಜುಮಾ ಮಸೀದಿ ಅಧ್ಯಕ್ಷ ಶಮೀರ್, ಪ್ರಮುಖರಾದ ಹಸನಬ್ಬ, ಎ.ಕೆ. ಅಬ್ದುಲ್ ರಹ್ಮಾನ್, ಬಶೀರ್ ಗುಂಡ್ಯ, ರಫೀಕ್ ಮಲ್ಲಿಗೆ, ಸಿ.ವಿ. ನಾರಾಯಣ ಶೆಟ್ಟಿ, ಅಬೂಬಕ್ಕರ್ ಸಿದ್ದೀಕ್, ಸಹಾಯ ಅಟೋ ರಿಕ್ಷಾ ಸಂಘದ ಮಾಜಿ ಅಧ್ಯಕ್ಷ ನಝೀರ್ ಅಹ್ಮದ್ ಮೊದಲಾದವರು ಉಪಸ್ಥಿತರಿದರು.
0 comments:
Post a Comment