ನಾಳೆಯ ಬಂದ್ ಉಗ್ರ ರೂಪ ತಾಳುತ್ತದೆ : ಕರವೇ ಎಚ್ಚರಿಕೆ - Karavali Times ನಾಳೆಯ ಬಂದ್ ಉಗ್ರ ರೂಪ ತಾಳುತ್ತದೆ : ಕರವೇ ಎಚ್ಚರಿಕೆ - Karavali Times

728x90

26 September 2020

ನಾಳೆಯ ಬಂದ್ ಉಗ್ರ ರೂಪ ತಾಳುತ್ತದೆ : ಕರವೇ ಎಚ್ಚರಿಕೆ

 


ಬೆಂಗಳೂರು, ಸೆ. 27, 2020 (ಕರಾವಳಿ ಟೈಮ್ಸ್) : ಸೆ. 28 ಸೋಮವಾರ (ನಾಳೆ) ಕರ್ನಾಟಕ ಬಂದ್ ಯಾವ ಸ್ವರೂಪ ಬೇಕಾದ್ರು ಪಡೆಯಬಹುದು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ  ಮಾತನಾಡಿದ ಅವರು, ಸೋಮವಾರದ ಬಂದ್ ಗೆ ಕರವೇ ಸಂಪೂರ್ಣ ಬೆಂಬಲಿಸಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕರವೇ ಕಾರ್ಯಕರ್ತರು ಬಂದ್ ನಲ್ಲಿ ಪಾಲ್ಗೊಳ್ಳುತ್ತಾರೆ. ಸೋಮವಾರದ ಬಂದ್‍ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಬೇಕು. ಹಾಗಾಗಿ ಬಂದ್ ಯಾವ ಸ್ವರೂಪ ಬೇಕಾದರೂ ಪಡೆಯಬಹುದು ಎಂದು ಎಚ್ಚರಿಕೆ ನೀಡಿದರು.

ರೈಲು, ವಿಮಾನ, ಹೆದ್ದಾರಿ, ಸಾರಿಗೆ ಓಡಾಟದಲ್ಲಿ ಏನು ಬೇಕಾದ್ರು ಆಗಬಹುದು. ಭೂಸುಧಾರಣಾ, ಎಪಿಎಂಪಿ ಕಾಯ್ದೆ ವಿರುದ್ಧ ಹೋರಾಟ ನಿಲ್ಲಲ್ಲ. ಈ ಎರಡು ಕಾಯ್ದೆಗಳು, ರೈತರಿಗೆ ಮರಣ ಶಾಸನ ಬರೆದಂತೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಂಡ ಸರ್ಕಾರಗಳು. ರೈತರನ್ನು ಉದ್ದಾರ ಮಾಡ್ತೀವಿ ಅಂತಾರೆ. ಒಳ್ಳೆ ಬೆಲೆ ಸಿಗುತ್ತೆ ಅಂತಿದ್ದಾರೆ ಅದೆಲ್ಲಾ ಸುಳ್ಳು. ರೈತನ ಭೂಮಿಯನ್ನು ಹಣವಂತರು, ನೂರಾರು, ಸಾವಿರಾರು ಎಕರೆ ಜಮೀನು ತಗೋತಾರೆ. ರೈತರು ಅವರ ಅಧೀನರಾಗ್ತಾರೆ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದರು.

ರೈತರ ಬಗ್ಗೆ ಕಾಳಜಿ ಇರುವ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ತಾರೆ. ಕೊರೊನಾದಿಂದ ಜನ ತುಂಬಾ ಕಷ್ಟಪಟ್ಟಿದ್ದಾರೆ. ಇಂತಹ ಸಮಯದಲ್ಲಿಯೂ ನಾವು ರೈತರ ಪರ ನಿಲ್ಲುತ್ತೇವೆ. ಸೋಮವಾರ ಸಾರ್ವಜನಿಕರಿಗೆ ತೊಂದರೆ ಆಗುತ್ತೆ, ಈ ಕಾರಣಕ್ಕೆ ನಾವು ಜನರ ಕ್ಷಮೆ ಕೋರುತ್ತೇವೆ ಎಂದರು.









  • Blogger Comments
  • Facebook Comments

0 comments:

Post a Comment

Item Reviewed: ನಾಳೆಯ ಬಂದ್ ಉಗ್ರ ರೂಪ ತಾಳುತ್ತದೆ : ಕರವೇ ಎಚ್ಚರಿಕೆ Rating: 5 Reviewed By: karavali Times
Scroll to Top