ಬೆಂಗಳೂರು, ಸೆ. 26, 2020 (ಕರಾವಳಿ ಟೈಮ್ಸ್) : ಸೆ. 28 ರಂದು ಸೋಮವಾರ ರೈತ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಸೆ. 28 ರಂದು ನಿಗದಿಯಾಗಿರುವ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ, ಹಿಂದೂಸ್ತಾನಿ ಸಂಗೀತ ವಿಷಯದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದೂಡಿದ್ದು, ಈ ಪರೀಕ್ಷೆಯನ್ನು ಸೆಪ್ಟಂಬರ್ 29ಕ್ಕೆ ಮರು ನಿಗದಿಪಡಿಸಲಾಗಿದೆ.
ಕೆ.ಓ.ಎಸ್. ವಿಜ್ಞಾನ-212ನ್ನು ಮುಂದೂಡಲಾಗಿದ್ದು, ಸೆಪ್ಟಂಬರ್ 30 ರಂದು ನಡೆಸಲಾಗುವುದು. ಇತರೆ ಪರೀಕ್ಷೆಗಳು ಪೂರ್ವ ನಿಗದಿಯಂತೆ ನಡೆಯಲಿದೆ ಎಂದು ಪರೀಕ್ಷಾ ಬೋರ್ಡ್ ಪ್ರಕಟಣೆ ತಿಳಿಸಿದೆ.
0 comments:
Post a Comment