ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಉಳಿ ಗ್ರಾಮದ ಕಕ್ಕೆಪದವು-ಹೆಗ್ಗಣಗುಳಿ ರಸ್ತೆಯಲ್ಲಿ ಭಾನುವಾರ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಸುಮಾರು 70 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ ಕಾರು ಪ್ರಯಾಣಿಕರು ಪವಾಡ ಸದೃಶದಿಂದ ಅಪಾಯದಿಂದ ಪಾರಾಗಿದ್ದಾರೆ.
ಅಜಿಲಮೊಗರು ಕಡೆಯಿಂದ ಬಂದ ಕಾರು ಸುಮಾರು 70 ಆಡಿ ಆಳದ ಕಮರಿಗೆ ಉರುಳಿದ್ದು, ನೇರವಾಗಿ ನೀರು ಹರಿಯುವ ತೋಡಿಗೆ ಬಿದ್ದಿದೆ. ಕಾರು ಚಾಲಕ ಸಹಿತ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಸುದ್ದಿ ಗೊತ್ತಾಗುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದು ಗಾಯಾಳುಗಳನ್ನು ಉಪಚರಿಸಿದ್ದಾರೆ. ಬಳಿಕ ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಗಿದೆ.
0 comments:
Post a Comment