ಸರಕಾರಗಳು ಪೊಲೀಸರ ಮೂಲಕ ನಾಟಕದ ದಾಳಿ ನಡೆಸಿದ್ದರ ಪರಿಣಾಮ ಇಂದು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬೆಳೆದಿದೆ : ಜನಜಾಗೃತಿ ವೇದಿಕೆ ಆಕ್ರೋಶ - Karavali Times ಸರಕಾರಗಳು ಪೊಲೀಸರ ಮೂಲಕ ನಾಟಕದ ದಾಳಿ ನಡೆಸಿದ್ದರ ಪರಿಣಾಮ ಇಂದು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬೆಳೆದಿದೆ : ಜನಜಾಗೃತಿ ವೇದಿಕೆ ಆಕ್ರೋಶ - Karavali Times

728x90

23 September 2020

ಸರಕಾರಗಳು ಪೊಲೀಸರ ಮೂಲಕ ನಾಟಕದ ದಾಳಿ ನಡೆಸಿದ್ದರ ಪರಿಣಾಮ ಇಂದು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬೆಳೆದಿದೆ : ಜನಜಾಗೃತಿ ವೇದಿಕೆ ಆಕ್ರೋಶ



ಬಂಟ್ವಾಳ, ಸೆ. 23, 2020 (ಕರಾವಳಿ ಟೈಮ್ಸ್) : ಕೋಟ್ಪಾ ಕಾಯ್ದೆ ಜಾರಿ ಮಾಡಿ ಪೊಲೀಸ್ ಇಲಾಖೆ ಮೂಲಕ ಸರಕಾರಗಳು ಕೇವಲ ತೋರಿಕೆಗಾಗಿ ಕೆಲ ಶಾಲಾ-ಕಾಲೇಜು ಪರಿಸರದಲ್ಲಿ ದಾಳಿ ನಾಟಕ ಮಾಡಿದ್ದು ಬಿಟ್ಟರೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರೆ ಡ್ರಗ್ಸ್ ಪ್ರಕರಣಗಳು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ವೇದಿಕೆಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬುಧವಾರ ಬಂಟ್ವಾಳದ ಯೋಜನೆಯ ಜಿಲ್ಲಾ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮಾದಕ ವಸ್ತು ನಿಗ್ರಹಿಸಲು ಹಲವು ಕಠಿಣ ಕಾನೂನುಗಳಿದ್ದರೂ ಅದರ ಸಮರ್ಪಕವಾದ ಬಳಕೆ ಇಲ್ಲದ ಪರಿಣಾಮ ಇಂದು ರಾಜ್ಯದಲ್ಲಿ ಡ್ರಗ್ಸ್ ಪ್ರಕರಣಗಳು ಗಬ್ಬೆದ್ದು ಹೋಗಿದ್ದು, ವ್ಯವಸ್ಥೆಯ ಅಲ್ಲೋಲಕಲ್ಲೋಲತೆಗೆ ಕಾರಣವಾಗಿದೆ ಎಂದು ಆರೋಪಿಸಿದರು, ನಾರ್ಕೋಟಿಕ್ ಕಂಟೋಲ್ ಕಾಯ್ದೆ, ಕೋಟ್ಪಾ ಕಾಯ್ದೆ, ಸೆಂಟ್ರಲ್ ಅಬಕಾರಿ ಕಾಯ್ದೆ, ಎನ್ ಡಿ ಎಸ್ ಆಕ್ಟ್ ಮೊದಲಾದ ಕಠಿಣ ಕಾನೂನುಗಳಿದ್ದರೂ ಪ್ರಭಾವಿಗಳ ಡ್ರಗ್ಸ್ ವ್ಯವಹಾರಗಳಿಗೆ ಇದರಿಂದ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದರೆ ನಮ್ಮ ಸರಕಾರಗಳ ನಡೆಯೇ ಪ್ರಶ್ನಾರ್ಹವಾಗಿದೆ ಎಂದರು. 

ಮಾದಕ ವಸ್ತು ವ್ಯಸನಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಅಂತಹ ಅಡ್ಡೆಗಳ ಬಗ್ಗೆ ಪೊಲೀಸರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅಂತಹ ಅಡ್ಡೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿ ಮಟ್ಟದಿಂದಲೇ ಮಾಹಿತಿ ಸೋರಿಕೆಯಾಗಿ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳ ಬೆದರಿಕೆಗಳಿಗೂ ಒಳಗಾಗಬೇಕಾದ ಆತಂಕಕಾರಿ ಸನ್ನಿವೇಶಗಳಿಗೂ ನಮ್ಮ ಸಮಾಜ ಸಾಕ್ಷಿಯಾಗಬೇಕಾಗಿ ಬರುತ್ತಿರುವುದು ಅತ್ಯಂತ ವಿಷಾದನೀಯ ಹಾಗೂ ಖಂಡನೀಯ ಎಂ ಪಾಯಸ್ ಇಂತಹ ಸಂದರ್ಭಗಳಲ್ಲಿ ಡಗ್ಸ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವವರಿಗೆ ಯಾವುದೇ ಆತಂಕ, ಅಡಚಣೆಗಳು ಬಂದಲ್ಲಿ ಅಂತಹ ಮಂದಿಗಳು ನೇರವಾಗಿ ಜನಜಾಗೃತಿ ವೇದಿಕೆಯನ್ನು ಸಂಪರ್ಕಿಸಿದಲ್ಲಿ ಎಲ್ಲ ಪೂರಕ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು. 

ರಾಜ್ಯದ ಯುವ ಜನತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ಯಾವುದೇ ಮಾದಕ ವಸ್ತುಗಳ ವ್ಯವಹಾರ, ಸೇವನೆಗಳಿದ್ದಲ್ಲಿ ಸರಕಾರ ಇರುವ ಕಠಿಣ ಕಾನೂನುಗಳನ್ನು ಬಳಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು. ಜನಜಾಗೃತಿ ವೇದಿಕೆ ಡ್ರಗ್ಸ್ ಮೊದಲಾದ ಮಾದಕ ವಸ್ತುಗಳ ಗಂಭೀರ ಪರಿಣಾಮದ ಬಗ್ಗೆ ಹಿಂದಿನಿಂದಲೂ ವಿಶೇಷ ಜಾಗೃತಿ ಮೂಡಿಸುತ್ತಿದ್ದರೂ ಸರಕಾರಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕಠಿಣ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಇದೀಗ ಹೆಣ್ಣು ಮಕ್ಕಳು ಕೂಡಾ ಈ ಪ್ರಕೆರಣದಲ್ಲಿ ಕಬಂಧ ಬಾಹು ವಿಸ್ತರಿಸಿದ ಪರಿಣಾಮ ಇಡೀ ರಾಜ್ಯ ಇಂದು ತಲೆ ತಗ್ಗಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ಬೊಟ್ಟು ಮಾಡಿದರು. 

ಇದೀಗ ಡ್ರಗ್ಸ್ ಮಾಯಾಜಾಲ ವ್ಯಾಪಕವಾಗಿರುವ ಬಗೆಗಿನ ಸ್ಪಷ್ಟ ಚಿತ್ರಣ ಹೊರ ಬಂದಿದ್ದು, ಇನ್ನಾದರೂ ಸರಕಾರಗಳು ಈ ಪ್ರಕರಣ ಯಾವುದೇ ಕಾರಣಕ್ಕೂ ಮುಚ್ಚಿ ಹೋಗದಂತೆ ಎಚ್ಚರವಹಿಸಿ ಇದರ ಮೂಲ ಬೇರನ್ನು ಪತ್ತೆ ಹಚ್ಚಿ ಬೇರು ಸಹಿತ ಕಿತ್ತು ಹಾಕಬೇಕು ಎಂದು ವಿನ್ಸೆಂಟ್ ಪಾಯಸ್ ಆಗ್ರಹಿಸಿದರು. 

ಈ ಸಂದರ್ಭ ಜಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ರಾಮಚಂದ್ರ, ಕಾಸರಗೋಡು ಜಿಲ್ಲಾಧ್ಯಕ್ಷ ಅಶ್ವತ್, ವಿವಿಧ ತಾಲೂಕು ಘಟಕಾಧ್ಯಕ್ಷರುಗಳಾದ ಮಹಾಬಲ ಚೌಟ, ಶಾರದಾ, ವಿಶ್ವನಾಥ ರೈ, ಮಹಾಬಲ ರೈ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳ ಜಯಾನಂದ ಪಿ ಹಾಗೂ ಜಯಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 










  • Blogger Comments
  • Facebook Comments

0 comments:

Post a Comment

Item Reviewed: ಸರಕಾರಗಳು ಪೊಲೀಸರ ಮೂಲಕ ನಾಟಕದ ದಾಳಿ ನಡೆಸಿದ್ದರ ಪರಿಣಾಮ ಇಂದು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬೆಳೆದಿದೆ : ಜನಜಾಗೃತಿ ವೇದಿಕೆ ಆಕ್ರೋಶ Rating: 5 Reviewed By: karavali Times
Scroll to Top