ಮಂಗಳೂರು, ಸೆ. 21, 2020 (ಕರಾವಳಿ ಟೈಮ್ಸ್) : ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ ಪ್ರಾಯೋಜಿತ ವಿಶಿಷ್ಟ ಕಾರ್ಯಕ್ರಮ ಜೈನ ಮಾಧ್ಯಮ ಗೋಷ್ಠಿಯು ಸೆ 19 ರಂದು ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ ಪೇಜ್‍ನಲ್ಲಿ ನೇರ ಪ್ರಸಾರ ನಡೆಯಿತು. ಮಾಜಿ ಸಚಿವ ಅಭಯಚಂದ್ರ ಜೈನ್ ಜೈನ ಮಾಧ್ಯಮ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮಾಧ್ಯಮವು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದ್ದು ಜನಮಾನಸಕ್ಕೆ ಸ್ಪಂದಿಸುವಂತಿರಬೇಕು ಎಂದರು.
ಚಿತ್ತ ಜಿನೇಂದ್ರ, ಸ್ಫೂರ್ತಿ ಜೈನ್ ಬೆಂಗಳೂರು, ನಿರಂಜನ್ ಜೈನ್ ಕುದ್ಯಾಡಿ, ಮಹಾವೀರ್ ಪ್ರಸಾದ್ ಹೊರನಾಡು, ವಜ್ರಕುಮಾರ್ ಬೆಂಗಳೂರು, ಸುದೇಶ್ ಜೈನ್ ಮಕ್ಕಿಮನೆ, ಅಕ್ಷಯ್ ಜೈನ್ ಕೆರ್ವಾಸೆ, ರಾಕೇಶ್ ಸ್ವೀಡನ್ ಇವರು ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ ಕಾರ್ಯಕ್ರಮಗಳನ್ನು ಹಾಗೂ ಮುಂಬರುವ ಕಾರ್ಯಕ್ರಮಗಳ ರೂಪುರೇಶೆಗಳ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಚಂದನ ಟಿವಿಯ ಜಿನದರ್ಶನದ ಬ್ರಾಹ್ಮಿಳಾ ಮದನ್, ಚಂದನ ಟಿವಿಯ ರತ್ನತ್ರಯ ಧಾರಾವಾಹಿಯ ಡಾ. ನೀರಜಾ ನಾಗೇಂದ್ರ ಕುಮಾರ್, ಜ್ವಾಲಾಮಾಲ ನ್ಯೂಸ್‍ನ ವೈಶಾಲಿ ಚಂದ್ರಪ್ರಭು, ಶ್ರೇಯಾ ಟಿವಿಯ ಶ್ವೇತಾ ನಿಹಾಲ್ ಜೈನ್, ನ್ಯೂಸ್18 ಟಿವಿ ನಿರೂಪಕಿ ನವಿತಾ ಜೈನ್, ಟಿವಿ ರಿಪೋರ್ಟರ್ ಅರುಣಾ ಶಿರಗುಪ್ಪಿ, ಟಿವಿ9 ನಿರೂಪಕಿ ಶುಭಶ್ರೀ ಜೈನ್, ಎಎನ್9 ಕನ್ನಡ ನ್ಯೂಸ್‍ನ ಶುಭಾಶಯ ಜೈನ್, ಪ್ರಾಧ್ಯಾಪಕಿ ಹಾಗೂ ನಿರೂಪಕಿ ಶ್ರುತಿ ಜೈನ್, ರೇಡಿಯೋ ಸಿಟಿ ಆರ್.ಜೆ. ರಜಸ್ ಜೈನ್ ಬೆಂಗಳೂರು ಮೊದಲಾದವರು ಭಾಗವಹಿಸಿದ್ದರು.
ಕರ್ನಾಟಕ ಪತ್ರಕರ್ತರ ಸಂಘದ ದ.ಕ. ಜಿಲ್ಲಾಧ್ಯಕ್ಷ್ಯ ಸುದೇಶ್ ಕುಮಾರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸುದೇಶ್ ಮಕ್ಕಿಮನೆ ಕಲಾವೃಂದ ವಂದಿಸಿ, ಸಂಸ್ಕೃತಿ ಜೈನ್ ಎಳನೀರು ಕಾರ್ಯಕ್ರಮ ನಿರೂಪಿಸಿದರು. ಪದ್ಮಪ್ರಿಯಾ ಕೇಳ ಪ್ರಾರ್ಥನೆ ನಡೆಸಿದರು. ಅಭಿನಂದನ್ ಕುಮಾರ್ ಇಂದ್ರ ಅಜೆಕಾರು ಶಾಂತಿಮಂತ್ರ ಪಠಣಗೈದರು.
0 comments:
Post a Comment