ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 623 ಅಂಕಗಳನ್ನು ಪಡೆದ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ, ಬಿ.ಸಿ.ರೋಡು ಸಮೀಪದ ತಲಪಾಡಿ ನಿವಾಸಿ ಅವಿಲ್ ಲೂವಿಸ್-ಲವೀನಾ ಡಿ’ಸೋಜ ದಂಪತಿಯ ಪುತ್ರಿ ಅವ್ರಿಲ್ ಲೀವಾ ಲೂವಿಸ್ ಅವರನ್ನು ಜೆಡಿಎಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭ ನ್ಯಾಯವಾದಿ ಉಮೇಶ್ ಕುಮಾರ್ ವೈ, ಜೆಡಿಎಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯಾಧ್ಯಕ್ಷ ಪಿ.ಎ. ರಹೀಂ, ಜೆಡಿಎಸ್ ಜಿಲ್ಲಾ ಅಲ್ಲಸಂಖ್ಯಾತ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್, ಯುವ ಜನತಾದಳ ಬಂಟ್ವಾಳ ನಗರಾಧ್ಯಕ್ಷ ಸವಾಝ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment