ಬಂಟ್ವಾಳ ಸೆ. 08, 2020 (ಕರಾವಳಿ ಟೈಮ್ಸ್) : ಇರಾ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಚುನಾವಣಾ ಪೂರ್ವಭಾವಿ ಸಭೆಯು ಇರಾ-ಕಲ್ಲಾಡಿ ಮಲಯಾಳಿ ಬಿಲ್ಲವ ಸಭಾಭವನದಲ್ಲಿ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ಗ್ರಾಮ ಸ್ವರಾಜ್ಯಕ್ಕೆ ಹೆಚ್ಚು ಒತ್ತು ನೀಡಿ ಹಳ್ಳಿಯ ಅಭಿವೃದ್ದಿಯನ್ನು ಮಾಡಿ ಬಡವರ ಬಗ್ಗೆ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೆ ತಂದ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ದೇಶದ ಅಭಿವೃದ್ಧಿಯ ಕಾಳಜಿಯಿದ್ದು, ಚುನಾವಣಾ ಸಂಧರ್ಭದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಯಾವುದೇ ಜನ ಪರ ಕಾರ್ಯಕ್ರಮಗಳನ್ನು ಮಾಡದ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಗ್ರಾಮೀಣ ಭಾಗದ ಜನರು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಾಠ ಕಲಿಸಬೇಕಾಗಿದೆ ಹಾಗೂ ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿಂದಲೇ ಶ್ರಮ ಪಡುವಂತೆ ಕರೆ ನೀಡಿದರು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಶಾಸಕ ಯು ಟಿ ಖಾದರ್ ಗ್ರಾಮಕ್ಕೆ ನೀಡಿದ ಹಲವು ಕೋಟಿ ರೂಪಾಯಿಗಳ ಅನುದಾನವನ್ನು ಹಿಂದಿನ ಕಾಂಗ್ರೆಸ್ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತ್ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಸೂತ್ರಬೈಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕಾಧ್ಯಕ್ಷ ದಿನೇಶ್ ಮೂಳೂರು, ವಲಯ ಕಾಂಗ್ರೆಸ್ ಗೌರವಾಧ್ಯಕ್ಷ ಉಸ್ಮಾನ್ ಕುರಿಯಾಡಿ, ಗ್ರಾ.ಪಂ. ಮಾಜಿ ಅಧ್ಯಕ್ಷ ತುಳಸಿ ಪೂಜಾರಿ, ಅಬ್ದುಲ್ ರಹಿಮಾನ್ ಸಂಪಿಲ, ಪಕ್ಷ ಪ್ರಮುಖರಾದ ಹಾಜಿ ಸಿ ಎಚ್ ಮುಹಮ್ಮದ್ ಬಾಳೆಪುಣಿ, ಉಮ್ಮರ್ ಎಂ ಬಿ, ಮೊಯಿದು ಕುಂಞÂ, ಶಶಿಧರ ಶೆಟ್ಟಿ, ಇಬ್ರಾಹಿಂ ಸೈಟ್, ಪ್ರತಾಪ್ ಕರ್ಕೇರ, ಅಬೂಬಕ್ಕರ್ ಪರಪ್ಪು, ಅಚ್ಯುತ ಪೂಜಾರಿ, ಉಮ್ಮರ್ ಫಾರೂಕ್ ಇರಾ ಮೊದಲಾದವರು ಭಾಗವಹಿಸಿದ್ದರು.
ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ಮಾಜಿ ಅಧ್ಯಕ್ಷೆ ತುಳಸಿ ಪೂಜಾರಿ ವಂದಿಸಿದರು.
0 comments:
Post a Comment