ಮಂಗಳೂರು (ಕರಾವಳಿ ಟೈಮ್ಸ್) : ಮಂಗಳೂರಿನ ಸಂವೇದನ (ಸಿಟಿಜನ್ಸ್ ಅಲೇಯನ್ಸ್ ಫಾರ್ ರೂರಲ್ ಡೆವೆ¯ಪ್‍ಮೆಂಟ್ ಆಂಡ್ ಟ್ರೈನಿಂಗ್ ಸೊಸೈಟಿ) ಸಂಸ್ಥೆಗೆ ಬಜಾಲ್-ಪಕ್ಕಲಡ್ಕದ ಯುವಕ ಮಂಡಲದ ವತಿಯಿಂದ, ಅನಿವಾಸಿ ಭಾರತೀಯ ಸಂಸ್ಥೆ ಮಂಗಳೂರು ಎಸೋಸಿಯೇಶನ್ ಸೌದಿ ಅರೇಬಿಯಾ (ಎಂ.ಎ.ಎಸ್.ಎ.) ಉಪಾದ್ಯಕ್ಷ ಸತೀಶ್ ಕುಮಾರ್ ಹಾಗೂ ಜೋಯ್ ಫೆರ್ನಾಂಡಿಸ್ ಅವರ ಸಹಕಾರದಿಂದ 1.53 ಲಕ್ಷ ರೂಪಾಯಿ ಸಹಾಯಧನ ಒದಗಿಸಲಾಗಿದೆ.
ಕಳೆದ ಎರಡು ದಶಕಗಳಿಂದ ಎಚ್.ಐ.ವಿ. ರೋಗಿಗಳಿಗೆ ನಿರಂತರ ಸೇವೆ ಮಾಡುವ ಮೂಲಕ ಸೋಂಕಿತರ ಏಳಿಗೆಗಾಗಿ ಸರಕಾರÀದ ಯಾವುದೇ ಸಹಾಯವಿಲ್ಲದೆ ಕೇವಲ ದಾನಿಗಳ ಸಹಾಯದಿಂದ ಸಂವೇದನ ಸಂಸ್ಥೆ ಕಾರ್ಯಾಚರಿಸುತ್ತಿದೆ. ಸಹಾಯಧನ ಹಸ್ತಾಂತರದ ವೇಳೆ ಸಂತೋಷ್ ಬಜಾಲ್, ದೀಪಕ್ ಬೊಲ್ಲ, ಯಶ್ ರಾಜ್, ರಿತೇಶ್ ಬಜಾಲ್, ದಿರಾಜ್, ಸುಚಿತ್ರ ಶಕ್ತಿನಗರ ನಿಯೋಗದಲ್ಲಿದ್ದರು.
0 comments:
Post a Comment