ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಶಿಕ್ಷಕ ರಾಧಾಕೃಷ್ಣ ಬಾಳಿಗಾ ಅವರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಗಣಿತ ಹಾಗೂ ವಿಜ್ಞಾನ ವಿಷಯದ ಶಿಕ್ಷಕರಾಗಿ ಶಾಲೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಶಿಕ್ಷಕ ರಾಧಾಕೃಷ್ಣ ಬಾಳಿಗಾ ಅವರು ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿಯಿಂದ ಮತ್ತು ವಿಶಿಷ್ಟ ಶೈಲಿಯಲ್ಲಿ ಬೋಧನೆ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಬಿಎಸ್ಸಿ, ಬಿಎಡ್ ಪದವೀಧರರಾಗಿದ್ದಾರೆ ಇವರು.
ಇವರ ಶಿಷ್ಯ ವೃಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳನ್ನು ಹೊಂದಿ ಕಾರ್ಯನಿರತರಾಗಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ವಿಶಿಷ್ಟ ಶೈಲಿಯಲ್ಲಿ ಬೋಧನೆ ನೀಡುವ ಇವರ ಬಗ್ಗೆ ಪ್ರತೀ ವಿದ್ಯಾರ್ಥಿ ಶಾಲಾ ದಿನಗಳನ್ನು ಮುಗಿಸಿದರೂ ಇವರ ಮೇಲೆ ವಿಶೇಷ ಅಭಿಮಾನ ವ್ಯಕ್ತಪಡಿಸುತ್ತಾರೆ.
ಉತ್ತಮ ಜಿಲ್ಲಾ ಶಿಕ್ಷಕ ಭಾಜನರಾದ ಶಿಕ್ಷಕ ರಾಧಾಕೃಷ್ಣ ಬಾಳಿಗ ಅವರನ್ನು ಶಾಲಾ ಸಂಚಾಲಕ ಜನಾರ್ದನ ಭಟ್, ಮುಖ್ಯ ಶಿಕ್ಷಕ ಭೋಜ ಸಹಿತ ಶಿಕ್ಷಕ ವೃಂದ, ಶಾಲಾಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment