ಮಂಗಳೂರು, ಸೆ. 19, 2020 (ಕರಾವಳಿ ಟೈಮ್ಸ್) : ಡ್ರಗ್ಸ್ ಸಾಗಾಟ ಪ್ರಕರಣದ ಆರೋಪದಲ್ಲಿ ಖ್ಯಾತ ಡ್ಯಾನ್ಸರ್ ಕಿಶೋರ್ ಅಮನ್ ಅಲಿಯಾಸ್ ಕಿಶೋರ್ ಶೆಟ್ಟಿಯನ್ನು ಶನಿವಾರ ಮಂಗಳೂರು ನಗರ ಕ್ರೈಂ ಬ್ರ್ಯಾಂಚ್ (ಸಿಸಿಬಿ) ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಿಶೋರ್ ಶೆಟ್ಟಿ ‘ಎಬಿಸಿಡಿ’ ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದರು. ಝೀ ಟಿವಿಯ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಟೆಲಿವಿಷನ್ ರಿಯಾಲಿಟಿ ಡ್ಯಾನ್ಸ್ ಸ್ಪರ್ಧೆಯ ಸೀಸನ್-2 ರಲ್ಲಿಯೂ ಭಾಗವಹಿಸಿ ಅಗ್ರ ಎಂಟರ ಹಂತಕ್ಕೂ ತಲುಪಿದ್ದರು. ಮಾದಕ ದ್ರವ್ಯ ಜಾಲ ಬೇಧಿಸಲು ರಾಜ್ಯಾದ್ಯಂತ ಪೆÇಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದರ ಮುಂದುವರಿದ ಭಾಗವಾಗಿ ಮಂಗಳೂರು ಸಿಸಿಬಿ ಪೊಲೀಸರು ಕಿಶೋರ್ ಶೆಟ್ಟಿಯನ್ನು ಕೂಡಾ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಕಿಶೋರ್ ಶೆಟ್ಟಿ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಸುದ್ದಿಗೋಷ್ಠಿ ನಡೆಸಿದ ಅಧಿಕೃತ ಮಾಹಿತಿ ನೀಡುವ ಬಗ್ಗೆ ತಿಳಿದು ಬಂದಿದೆ.
0 comments:
Post a Comment